Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಹೆಚ್ಚಳ

ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಹೆಚ್ಚಳ
bangalore , ಭಾನುವಾರ, 17 ಜುಲೈ 2022 (19:49 IST)
ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಶೇ 5ರ ಸರಕು ಸೇವಾ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು  ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಪ್ರತಿ ಉತ್ಪನ್ನದ ಮೇಲೆ ಸರಾಸರಿ  1 ರಂದ  3 ರೂ ರವರೆಗೆ ಬೆಲೆ ಹೆಚ್ಚಾಗಲಿದೆ. ಈ ಮೊದಲು ಲೀಟರ್ ಮೊಸರಿಗೆ  43 ರೂ ರಿಂದ  46 ರೂ ಆಗಲಿದೆ. ಅರ್ಧ ಲೀಟರ್ ಮೊಸರಿನ ಬೆಲೆ  22 ರೂ ರಿಂದ  24 ರೂ ಆಗಲಿದೆ. ಮಜ್ಜಿಗೆ 200 ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ಮೇಲೆ  1 ರೂ ಹೆಚ್ಚಿಸಲಾಗಿದೆ. ಪಾಕೆಟ್ಗಳ ಮೇಲೆ ಹಳೆಯ ದರಗಳೇ ನಮೂದಾಗಿರುತ್ತವೆ. ಆದರೆ ಗ್ರಾಹಕರು ಹೊಸದಾಗಿ ನಿಗದಿಪಡಿಸಿರುವಷ್ಟು ದರ ನೀಡಿ ಖರೀದಿಸಬೇಕು ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ನಾಳೆಯಿಂದಲೇ ಹೊಸ ಆದೇಶ ಜಾರಿಗೆ ಬರಲಿದೆ. ‘ನಂದಿನಿ’ ಬ್ರಾಂಡ್ನ ಅಡಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದನಾ ಮಹಾ ಮಂಡಳವು ಸಹ ಮಜ್ಜಿಗೆ, ಮೊಸರು, ತುಪ್ಪ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಏರಿಕೆಗೆ ನಿರ್ಧರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈದ್ಗಾ ಮೈದಾನ ಸರ್ಕಾರದ ಸ್ವತ್ತು ಎಂಬುದಕ್ಕೆ ನಾಗರಿಕ ಒಕ್ಕೂಟ ಮತ್ತೊಂದು ದಾಖಲೆ ಬಿಡುಗಡೆ