ಮಜ್ಜಿಗೆ ಕುಡಿಯುವುದರಿಂದ ಬಾಯಾರಿಕೆ ನೀಗುವುದಲ್ಲದೆ ಬೇರೆ ಯಾವ ಆರೋಗ್ಯ ಲಾಭಗಳಿವೆ ಅಂತ ಗೊತ್ತಾದ್ರೆ ನೀವು ಮರೆಯದೆ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳುತ್ತೀರಾ.
* ಅರ್ಧ ಚಮಚ ಶುಂಠಿ ರಸ ಹಾಗೂ ಜೀರಿಗೆ ಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.
* ಅಜೀರ್ಣ ಅಥವಾ ಒಗ್ಗದ ಆಹಾರ ಸೇವಿಸಿದ ಬಳಿಕ ಕಾಡುವ ಅತಿಸಾರ, ಆಮ್ಲೀಯತೆ ಮತ್ತು ನೀರಿನಂಶದ ಕೊರತೆಯನ್ನು ನಿವಾರಿಸಬಹುದು.
* ಊಟದ ನಂತರ ಮಸಾಲೆ ಭರಿತ ಮಜ್ಜಿಗೆ ಸೇವಿಸುವುದರಿಂದ ಆಹಾರವು ಜೀರ್ಣವಾಗುವಂತೆ ಮಾಡಲು ಬಹಳಷ್ಟು ಸಹಕಾರಿಯಾಗಿದೆ.
* ಮಜ್ಜಿಗೆ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಬಿ-ಕಾಂಪ್ಲೆಕ್ಸ್ ವಿಟಮಿನ್ಗಳನ್ನೂ, ಪ್ರೋಟೀನ್ ಮತ್ತು ಪೊಟ್ಯಾಷಿಯಂ ನಂತಹ ಖನಿಜಾಂಶಗಳನ್ನು ಒದಗಿಸುತ್ತದೆ.
* ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿ ಶುಂಠಿಯ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.