Publish Date: Wed, 28 Aug 2019 (11:15 IST)
Updated Date: Wed, 28 Aug 2019 (11:17 IST)
ಬೆಂಗಳೂರು : ಅನರ್ಹ ಶಾಸಕರ ಗೋಳು ಕೇಳಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಅನರ್ಹ ಶಾಸಕ ಮುನಿರತ್ನ,’ ಅನರ್ಹ ಶಾಸಕರು ನಾವು ಸದ್ಯ ಅತಂತ್ರರಾಗಿದ್ದೇವೆ. ಬಿಜೆಪಿ ಸರ್ಕಾರ ರಚನೆಗೆ ನಮ್ಮ ಭವಿಷ್ಯವನ್ನೇ ಅಡವಿಟ್ಟಿದ್ದೇವೆ. ರಾಜೀನಾಮೆ ನೀಡಿದ್ದರಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ. ನಮ್ಮ ಕಣ್ಣೀರಿನ ಮೇಲೆ ಸರ್ಕಾರ ಮಾಡಿದ್ದೀರಿ, ನಮ್ಮನ್ನ ಕಣ್ಣೀರು ಹಾಕಿಸಿದ್ರೆ ಸರ್ಕಾರ ಹೆಚ್ಚು ಕಾಲ ಉಳಿಯಲ್ಲ. ಎಷ್ಟು ದಿನ ಅನರ್ಹ ಶಾಸಕ ಎಂದು ಕರೆಸಿಕೊಳ್ಳುವುದು. ಕಾನೂನು ಹೋರಾಟಕ್ಕೆ ಸಾಥ್ ನೀಡಿ ಕೇಸ್ ಮುಗಿಸಿಕೊಡಿ’ ಎಂದು ಸಿಎಂ ಮುಂದೆ ಅಂಗಲಾಚಿದ್ದಾರೆ ಎನ್ನಲಾಗಿದೆ.
ಅಲ್ಲದೇ ಮುನಿರತ್ನ ಭಾವನಾತ್ಮಕ ಮಾತಿಗೆ ಯಡಿಯೂರಪ್ಪ ಕಣ್ಣೀರು ಹಾಕಿದ್ದು, ನಿಮ್ಮನ್ನ ಬಿಟ್ಟು ನಾವು ಸರ್ಕಾರ ನಡೆಸಲ್ಲ ಎಂದು ಭರವಸೆ ನೀಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.