Publish Date: Tue, 28 Feb 2023 (16:40 IST)
Updated Date: Tue, 28 Feb 2023 (16:45 IST)
ಯಡಿಯೂರಪ್ಪ ಅವರನ್ನು ಸಹ ಮಾರ್ಗ ದರ್ಶಕ ಮಂಡಳಿಗೆ ಕಳಿಸುವುದರಲ್ಲಿ ಸಂಶಯವಿಲ್ಲ. ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಮಾಡುತ್ತೇನೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ ವಿಧಿಯಿಲ್ಲ ಲಿಂಗಾಯತರಲ್ಲಿ ಯಡಿಯೂರಪ್ಪ ದೊಡ್ಡ ಲೀಡರ್ ಅವರನ್ನು ಇಟ್ಕೊಕೊಳ್ಳಬೇಕೋ,ಬೇಡ್ವಾ ಎನ್ನುವ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಆದ್ದರಿಂದ ಯಡಿಯೂರಪ್ಪ ಅವರನ್ನು ಸಹ ಮಾರ್ಗ ದರ್ಶಕ ಮಂಡಳಿಗೆ ಕಳಿಸುವುದರಲ್ಲಿ ಸಂಶಯವಿಲ್ಲ.ಎಲ್.ಕೆ ಆಡ್ವಾಣಿ, ಮುರಳಿ ಮನೋಹರ ಜೋಶಿ, ಅರುಣ ಚೌರಿ ಅವರಿಗೆ ವಯಸ್ಸು ಆಗಿದೆ ಎಂದು ಮಾರ್ಗದರ್ಶಕ ಮಂಡಳಿಗೆ ಕಳಿಸಿದ್ರು.ಇಡಿ ರೈಡ್ ಮಾಡಿಸುತ್ತಾರೆ , ಸಿಎಂ ಸ್ಥಾನದಿಂದ ಯಾಕೆ ಇಳಿಸಿದ್ರು ಎಂದು ಮೋದಿ,ಅಮಿತ್ ಶಾ ಹೇಳಬೇಕು.ಚುನಾವಣೆಯಲ್ಲಿ ಲಿಂಗಾಯತ ಮತಗಳಿಗಾಗಿ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳುತ್ತಾರೆ.ಕಾಮಧೇನು ತರ ಎಲ್ಲಾ ರೀತಿಯಾಗಿ ಹಿಂಡಿ ಮನೆಗೆ ಕಳಿಸುತ್ತಾರೆ ಎಂದು ಬಿಜೆಪಿ ಗೆ ಟಾಂಗ್ ನೀಡಿದ್ರು.