Publish Date: Sun, 10 Apr 2022 (18:21 IST)
Updated Date: Sun, 10 Apr 2022 (18:24 IST)
ಹಿಜಾಬ್, ವ್ಯಾಪಾರ, ಹಲಾಲ್, ಧ್ವನಿವರ್ಧಕ ನೆಪದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುತ್ತಿರುವ ಬಿಜೆಪಿ ಗಲ್ಫ್ ರಾಷ್ಟ್ರಗಳಿಂದ ಬರುವ ಪೆಟ್ರೋಲ್, ಡಿಸೇಲ್ ತರಿಸಿಕೊಳ್ಳುವುದನ್ನು ಬಿಡಲಿ ಎಂದು ಬೆಳಗಾವಿಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು. ಕೇವಲ ಮುಸ್ಲಿಂ ಸಮಾಜವನ್ನು ಟಾರ್ಗೆಟ್ ಮಾಡಿಕೊಂಡು ಇಲ್ಲಸಲ್ಲದ ಆರೋಪ ಹೊರಿಸಿ ಮಾತನಾಡುವ ಬಿಜೆಪಿ ನಾಯಕರು ರಾಜ್ಯದಲ್ಲಿನ ಕುಂಠಿತಗೊಂಡಿರುವ ಅಭಿವೃದ್ಧಿ ಮರೆಮಾಚಲು ದಿನಕ್ಕೊಂದು ವಿವಾದ ಸೃಷ್ಟಿಸಿ ಜನರು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ ಯಾವ ಹೋರಾಟ, ಸಂಘಟನೆ ಮಾಡಿದರೂ ಮಾಧ್ಯಮದವರು ಸಹಕಾರ ನೀಡುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.