Select Your Language

Notifications

webdunia
webdunia
webdunia
webdunia

ಮಾಡಬಾರದ್ದನ್ನು ಮಾಡಿದ 12 ಪೊಲೀಸರು ಸಸ್ಪೆಂಡ್

ಪೊಲೀಸ್
ಒಂದು ಡಜನ್ ಪೊಲೀಸರು ಮಾಡಬಾರದ ಕೆಲಸ ಮಾಡಿ ಸಸ್ಪೆಂಡ್ ಆಗಿದ್ದಾರೆ.   

ಕರ್ತವ್ಯಲೋಪ, ತನಿಖೆಯಲ್ಲಿ ನಿಷ್ಕಾಳಜಿ, ಅಕ್ರಮ ಚಟುವಟಿಕೆ ಮತ್ತು ವ್ಯಾಜ್ಯಗಳಲ್ಲಿ ಭಾಗಿ ಸೇರಿದಂತೆ ಹಲವು ವಿಚಾರಗಳಲ್ಲಿ ಭಾಗಿಯಾಗಿದ್ದ ಆರೋಪದಡಿ 12 ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಹುಬ್ಬಳ್ಳಿ – ಧಾರವಾಡ ಕಮಿಷ್ನರೇಟ್‌ ಘಟಕ ವ್ಯಾಪ್ತಿಯ 12 ಜನ ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ ಅಂತ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ತಿಳಿಸಿದ್ದಾರೆ.

ಈ ವರ್ತನೆ ತೋರಿದ ಸಿಬ್ಬಂದಿ ವಿರುದ್ಧ ಡಿಸಿಪಿ ಮತ್ತು ಎಸಿಪಿಗಳು ತನಿಖೆ ನಡೆಸಿ ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ಧಾರವಾಡದಲ್ಲಿ ನಡೆದ ಚಾಕು ಇರಿತ ಮತ್ತು ಇತರೆ ಪ್ರಕರಣಗಳಿಗೆ ಸಬಂಧಿಸಿದಂತೆ 6 ಜನ ಪೊಲೀಸ್‌ರನ್ನು ಅಮಾನತುಗೊಳಿಸಲಾಗಿದೆ.

ಅದರಂತೆ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಸಂದರ್ಭ ಮತ್ತು ಇತರೆ ಅಕ್ರಮ ಚಟುವಟಿಕೆ ನಡೆಸುವವರೊಂದಿಗೆ ಸಂಪರ್ಕ ಹೊಂದಿದ್ದ 6 ಜನ ಪೊಲೀಸ್‌ ಸಿಬ್ಬಂದಿ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.  

ಶೋಕಾಸ್‌ ನೋಟಿಸ್‌ : ರೌಡಿಶೀಟರ್‌ಗಳ ಜತೆ ನಿಕಟ ಸಂಪರ್ಕ ಹೊಂದಿದ್ದ ಎಎಸ್‌ಐ, ಪಿಎಸ್‌ಐ ಹಾಗೂ ಕೆಲ ಸಿಬ್ಬಂದಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ.





Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಗೆ ಈ ಊರಿನಿಂದ ನೇರ ವಿಮಾನ ಹಾರಾಟ ಶುರು