Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಒಳಾಂಗಣ ಈಜು ಕೊಳದಲ್ಲಿ ಈಜಾಡುವ ಮೂಲಕ ಉದ್ಘಾಟನೆ ನಡೆಸಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾರ್ವಜನಿಕರ ಗಮನ ಸೆಳೆದರು. ನಗರದ ಕನಕದಾಸ ಬಡಾವಣೆಯಲ್ಲಿ ಇರುವ ನೂತನ ಒಳಾಂಗಣ ಈಜುಕೊಳವನ್ನು ಇದಕ್ಕೂ ಮೊದಲು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ಆ ಬಳಿಕ ಈಜುಕೊಳಕ್ಕೆ ಧುಮುಕುವ ಮೂಲಕ ಪ್ರಾಯೋಗಿಕವಾಗಿ ಚಾಲನೆ ನೀಡಿದರು. ಕನಕದಾಸ ಬಡಾವಣೆಯಲ್ಲಿ ಇರುವ ನೂತನ ಒಳಾಂಗಣ ಈಜುಕೊಳವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನುದಾನದಲ್ಲಿ ಸುಮಾರು 3.25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.