ಬೆಂಗಳೂರು: ಕೋವಿಡ್‌ಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೋವಿಡ್ ಫ್ರಂಟ್‌ಲೈನ್ ವಾರಿಯರ್ಸ್‌ಗಳಿಗಾಗಿ (ಕೋವಿಡ್ ಏಂಜಲ್ಸ್) ವಂಡರ್‌ಲಾ ಹಾಲಿಡೇಸ್ ಗೌರವಾರ್ಥವಾಗಿ ಉಚಿತ ವಂಡರ್‌ಲಾ ಪಾರ್ಕ್ ಪಾಸ್ ನೀಡಲು ಮುಂದಾಗಿದೆ.
ವೈದ್ಯರು, ನರ್ಸ್‌ಗಳು, ಸಹಾಯಕ ಸಿಬ್ಬಂದಿ, ಮಾಧ್ಯಮ ವರದಿಗಾರರು, ಪೊಲೀಸರು, ಸ್ಮಶಾನದಲ್ಲಿ ಕೆಲಸ ಮಾಡುವವರು, ಆಶಾ ಕಾರ್ಯಕರ್ತೆಯರು ಈ ಕೊಡುಗೆಗೆ ಅರ್ಹರಾಗಿದ್ದಾರೆ. ಜೊತೆಗೆ ಸಾಮಾಜಿಕ ಕಾರ್ಯಕರ್ತರಿಗೂ ಸಹ ಉಚಿತ ಪಾಸ್ ನೀಡಲು ನಿರ್ಧರಿಸಿದೆ. ಈ ಉಚಿತ ಪಾಸ್ ಒಟ್ಟು 1500 ಕೋವಿಡ್ ಏಂಜಲ್ಸ್‌ಗಳು ಹಾಗೂ ಅವರ ಕುಟುಂಬವೂ ಸೇರಿದಂತೆ ಒಟ್ಟು 6 ಸಾವಿರ ಮಂದಿಗೆ ಸಿಗಲಿದೆ. ಜೊತೆಗೆ ಭೋಜನ, ಚಹಾ ಹಾಗೂ ಎಲ್ಲಾ ರೈಡ್‌ಗಳ ಬಳಕೆಗೂ ಉಚಿತ ಅವಕಾಶವಿರಲಿದೆ. ಇದರ ಉಪಯೋಗ ಪಡೆಯಲು ಅರ್ಹರು http://www.wonderla.com ವಂಡರ್‌ಲಾ ವೆಬ್‌ಸೈಟ್‌ನಲ್ಲಿ ಭೇಟಿ ನೀಡಬಹುದು.
ತಮ್ಮ ಸುತ್ತಮುತ್ತಲು ಇರುವ ಈ ವಾರಿಯರ್ಸ್‌ಗಳ ಕೆಲಸಗಳನ್ನು ಎತ್ತಿ ತೋರಿಸುವ ವಿಡಿಯೋ ಹಾಗೂ ಫೋಟೋಗಳನ್ನು @wonderla_in ಅಥವಾ wonderla @ facebook.com/ Wonderla ಫೇಸ್‌ಬುಕ್ ಪೇಜ್‌ಗೆ ಟ್ಯಾಗ್ ಮಾಡಬಹುದು. ಈ ಕೊಡುಗೆಯು ಆಗಸ್ಟ್ 2ರಿಂದ 8ರವರೆಗೆ ಇರಲಿದ್ದು, ಈ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಬಹುದು. ಅಥವಾ 08037230333 ಮತ್ತು 080 35073966 ಇಲ್ಲಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ಆಯ್ಕೆಯಾದ 1500 ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ (6000 ಜನ) ಉಚಿತ ಪಾಸ್ ಜೊತೆಗೆ ಇತರೆ ಸೌಲಭ್ಯ ಹಾಗೂ ಗೌರ