Publish Date: Sat, 31 Jul 2021 (17:42 IST)
Updated Date: Sat, 31 Jul 2021 (17:43 IST)
ಬೆಂಗಳೂರಿನ ನಾಗರಬಾವಿ ಬಡಾವಣೆಯಲ್ಲಿ ನಾಗರಹಾವಿನ ಹಾವಳಿ ಹೆಚ್ಚಾಗಿದೆ. ತಗ್ಗು ಪ್ರದೇಶ.ಮತ್ತು ಖಾಲಿಜಾಗದಲ್ಲಿ ಆರಡಿ ಕುರುಚಲ ಗಿಡಗಳು ಬೆಳೆದಿರುವುದರಿಂದ ಆ ಜಾಗದಲ್ಲಿ ವಿಷಜಂತುಗಳ ಕಾಟ ವಿಪರೀತವಾಗಿದೆ.
ನಾಗರಬಾವಿ ಯಬಡಾವಣೆಯಲ್ಲಿರೆವಿನ್ಯೂ ನಿವೇಶನ ಬಿಡಿಎ ಜಾಗದಲ್ಲಿ ಪೂದೆಗಳು ಬೆಳೆದು ಇಲ್ಲಿ ಹಾವುಗಳು ವಾಸಿಸುವ ತಾಣಗಳಾಗಿದೆ ಬಿಬಿಎಂಪಿ ಅರಣ್ಯ ಇಲಾಖೆಗೆ ಹತ್ತಾರು ದೂರುಗಳು ಕೊಟ್ಟರೂ ಪ್ರಯೋಜನವಾಗಿಲ್ಲ.
ಸ್ನೇ
ಕ್ ಹಿಡಿಯುವವರನ್ನ ಕರೆಸಿಕೊಂಡು ಹಾವುಗಳನ್ನು ಹಿಡಿಸುವ ಕೆಲಸ ಇಲ್ಲಿನ ನಾಗರೀಕರು ಮಾಡುತ್ತಿದ್ದಾರೆ. ಬಿಬಿಎಂಪಿ ಹಾಗೂ ಬಿಡಿಎ ನಿಯಮಾವಳಿ ಪ್ರಕಾರ ಖಾಲಿನಿವೇಶನದ ಮಾಲೀಕರುಗಳು ಸ್ವಂತ ಖರ್ಚಿನಿಂದ ಸ್ವಚ್ಚಗೊಳಿಸುತ್ತಿರಬೇಕು. ಇಲ್ಲವಾದರೆ ದಂಡ ವಿಧಿಸುವ ಅಧಿಕಾರ ಇವರಿಗಿದೆ. ಅಪಾಯವಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.