Publish Date: Mon, 14 Nov 2022 (12:29 IST)
Updated Date: Mon, 14 Nov 2022 (12:32 IST)
ಹಾಸನ : ಜಿಲ್ಲೆಯಲ್ಲಿ ಮುಂದಿನ ವಾರ ಪ್ರವಾಸ ಮಾಡುತ್ತೇನೆ. ಹಾಸನದ ಪ್ರತಿ ಕ್ಷೇತ್ರದಲ್ಲೂ ಒಂದೊಂದು ದಿನ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.
ಇಂದು ಕಡೆ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ಹುಟ್ಟೂರು ಹರದನಹಳ್ಳಿಯಲ್ಲಿ ಮನೆದೇವರು ದೇವೇಶ್ವರನ ಪೂಜೆಗೆ ಆಗಮಿಸಿದ್ದ ವೇಳೆ ಹಾಸನದಲ್ಲಿ ಮಾತನಾಡಿದ ಅವರು,
ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ. ಹಾಸನ ಜಿಲ್ಲೆ ಪ್ರವಾಸದ ಬಳಿಕ ರಾಜ್ಯ ಪ್ರವಾಸವನ್ನು ಮಾಡುತ್ತೇನೆ. ರಾಜ್ಯವನ್ನ ಮರೆಯೊದಿಲ್ಲ, ಪ್ರವಾಸ ಮುಗಿಸಿ ಪಾರ್ಲಿಮೆಂಟ್ಗೂ ಹೋಗುತ್ತೇನೆ ಎಂದರು.