Select Your Language

Notifications

webdunia
webdunia
webdunia
webdunia

ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಪೂರ್ಣ

ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಪೂರ್ಣ
ವರ್ಷಕ್ಕೆ ಒಂದು ಬಾರಿ ಭಕ್ತರಿಗೆ ದರ್ಶನ ಕೊಡುವ ಹಾಸನಾಂಬೆಯ ದೇವಸ್ಥಾನದ ಹುಂಡಿ ಎಳಿಕೆ ಕಾರ್ಯ ಪೂರ್ಣಗೊಂಡಿದೆ. ತಡರಾತ್ರಿವರೆಗೂ ಎಣಿಕೆ ಕಾರ್ಯ ಮಾಡಲಾಯಿತು. ಇತಿಹಾಸ ಪ್ರಸಿದ್ದ ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 13ರಂದು ಅಕ್ಟೋಬರ್​ 27ರವರೆಗೂ ತೆರೆಯಲಾಯಿತು. ಈ ವೇಳೆ ಅತಿ ಹೆಚ್ಚು ಮೊತ್ತದ ದಾಖಲೆಯ ಆದಾಯ ಸಂಗ್ರಹವಾಗಿದೆ. ಈ ವರ್ಷ ಒಟ್ಟು ಹಾಸನಾಂಬೆ ಉತ್ಸವದಿಂದ  3 ಕೋಟಿ 69 ಲಕ್ಷ 51ಸಾವಿರದ 251 ರೂ. ಆದಾಯ ಸಂಗ್ರಹವಾಗಿದೆ. ಭಕ್ತರಿಂದ ಕಾಣಿಕೆ ರೂಪದಲ್ಲಿ 1 ಕೋಟಿ 88 ಲಕ್ಷ 40 ಸಾವಿರದ 935 ರೂ ಸಂಗ್ರಹವಾದರೆ, ವಿಶೇಷ ದರ್ಶನದ ಪಾಸ್ ಮಾರಾಟದಿಂದಲೂ 1 ಕೋಟಿ 48 ಲಕ್ಷ 27 ಸಾವಿರದ 600 ರೂ ಸಂಗ್ರಹವಾಗಿದೆ. ಜೊತೆಗೆ ಲಡ್ಡು ಪ್ರಸಾದ ಮಾರಾಟ ದಿಂದ 32 ಲಕ್ಷ 82 ಸಾವಿರದ 716 ರೂ ಆದಾಯ ಬಂದರೆ ಎಲ್ಲಾ ಮೂಲಗಳೂ ಸೇರಿ ಒಟ್ಟು  3 ಕೋಟಿ 69 ಲಕ್ಷ 51ಸಾವಿರದ 251 ರೂ ಸಂಗ್ರಹವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

6 ನೇ ತಾರೀಖು ಬೆಂಗಳೂರಿಗೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ