ಮಂಗಳೂರು: ಇಡೀ ಕರ್ನಾಟಕದಲ್ಲೇ ಈಗ ಇರುವ ಕೊರೋನಾ ಪ್ರಕರಣಕ್ಕೂ ಹೆಚ್ಚು ಕೇಸ್ ಗಳು ಕೇರಳದ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಮಾತ್ರ ಇದೆ. ಇದಕ್ಕೆಲ್ಲಾ ಕಾರಣ ಕೇರಳ ಸರ್ಕಾರ ಗಡಿ ಜಿಲ್ಲೆಯನ್ನು ನಿರ್ಲ್ಯಕ್ಷಿಸಿದ್ದು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕಾಸರಗೋಡು ಗಡಿ ಜಿಲ್ಲೆ ಎಂಬ ಕಾರಣಕ್ಕೆ ಇಲ್ಲಿ ಇತರ ಜಿಲ್ಲೆಗಳಂತೆ ಅಭಿವೃದ್ಧಿ ಕೆಲಸವಾಗಲೇ ಇಲ್ಲ. ಕಾಸರಗೋಡಿನ ಜನ ವಿದ್ಯಾಭ‍್ಯಾಸ, ವ್ಯವಹಾರ, ಉದ್ಯೋಗ, ಆರೋಗ್ಯ ಯಾವುದೇ ಸೌಲಭ್ಯ ಬೇಕಿದ್ದರೂ ಕರ್ನಾಟಕವನ್ನೇ ಅವಲಂಬಿಸಿದ್ದಾರೆ.
ಈಗ ಗಡಿ ಬಂದ್ ಆಗಿರುವುದು ಕೇರಳ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರಿಂದಾಗಿ ಇಲ್ಲಿ ಕೊರೋನಾ ಪೀಡಿತರಿಗೆ ಕರ್ನಾಟಕದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಇದುವೇ ಈಗ ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ರೋಶಕ್ಕೂ ಕಾರಣವಾಗಿರುವುದು. ಅದೇ ಕಾರಣಕ್ಕೆ ಕಾಸರಗೋಡು ಗಡಿ ತೆರೆಯುವಂತೆ ಕೇಂದ್ರದಿಂದ ಹಿಡಿದು, ಸುಪ್ರೀಂಕೋರ್ಟ್ ವರೆಗೆ ಕದ ತಟ್ಟುತ್ತಿದ್ದಾರೆ.