Publish Date: Thu, 02 Apr 2020 (09:50 IST)
Updated Date: Thu, 02 Apr 2020 (09:52 IST)
ಮಂಡ್ಯ: ಸಂಸದರ ಅಭಿವೃದ್ಧಿ ನಿಧಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲು ದೇಣಿಗೆ ನೀಡಿದ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ನೀಡಿದ ಕಿಡಿಗೇಡಿಗಳಿಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.
ಈ ಸಂಸದರೆಲ್ಲಾ 1 ಕೋಟಿ ರೂ. ನೀಡುತ್ತಿರುವುದು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ. ಸ್ವಂತ ಜೇಬಿನಿಂದಲ್ಲ. ಚುನಾವಣೆಗೆ ಕೋಟಿ ಕೋಟಿ ಖರ್ಚು ಮಾಡುವ ರಾಜಕಾರಣಿಗಳು ಈಗ ನಮ್ಮ ಹಣಕ್ಕೆ ಕೈ ಹಾಕಿದ್ದಾರೆ ಎಂದು ವ್ಯಕ್ತಿಯೊಬ್ಬ ಟಾಂಗ್ ನೀಡಿದ್ದ.
ಇದಕ್ಕೆ ತಿರುಗೇಟು ನೀಡಿದ ಸುಮಲತಾ ಅಂಬರೀಶ್ ಇಂತಹವರಿಗೆ ಸಹಾಯ ಮಾಡೋ ಬುದ್ಧಿಯಂತೂ ಇಲ್ಲ. ಆದ್ರೆ ಪಾಯಿಂಟ್ ಔಟ್ ಮಾಡಕ್ಕೆ ನೆಪ ಬೇಕು. ನಾನು ಯಾವುದನ್ನೂ ಚುನಾವಣೆ, ಮತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲ್ಲ. ಇಂತಹ ಜನರಿಗೆ ಅಂತಹ ನಾಯಕರನ್ನೇ ನೋಡಿ ಅಭ್ಯಾಸವಾಗಿದೆ ಎಂದಿದ್ದಾರೆ.