ತುಮಕೂರು : ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ತುಮಕೂರಿನ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡಿರುವುದರ ಬಗ್ಗೆ ತಿಳಿದುಬಂದಿದೆ.
ಇವರು ತುಮಕೂರಿನ ಮುಗ್ಗೊಂಡನಹಳ್ಳಿಯ ನಿವಾಸಿ ಹನುಮಂತರಾಯಪ್ಪ ಎಂಬುವವರ ಮನೆಯಲ್ಲಿ ತಂಗಿದ್ದರು. ಊರಿಗೆ ಬಂದ ಜಿ. ಪರಮೇಶ್ವರ್ ಅವರಿಗೆ ಅಲ್ಲಿನ ಜನತೆ ಅದ್ಧೂರಿ ಸ್ವಾಗತ ನೀಡಿದ್ದರು. ಅವರು ಹನುಮಂತರಾಯಪ್ಪ ಅವರ ಮನೆಯಲ್ಲಿ ಮುದ್ದೆ ಊಟಮಾಡಿ, ಚಾಪೆ ಮೇಲೆ ಮಲಗಿದ್ದರು.
ಜಿ. ಪರಮೇಶ್ವರ್ ಅಂದರೆ ಹೈಟೆಕ್. ಅವರು ಬಡವರ ಜೊತೆ ಬೇರೆಯುವುದಿಲ್ಲ ಎಂದು ಕೆಲವರು ಹೇಳಿದ್ದು ಅದಕ್ಕಾಗಿ ತಾನು ಸಾಮಾನ್ಯ ಜನರ ಜೊತೆ ವಾಸ್ತವ್ಯ ಹೂಡಿರುವುದಾಗಿ ತಿಳಿಸಿದ್ದಾರೆ. ತಾನು ಕೂಡ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿದ್ದು, ಬಡತನದ ಅರಿವು ತನಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ