Publish Date: Sat, 16 Sep 2023 (14:01 IST)
Updated Date: Sat, 16 Sep 2023 (14:04 IST)
ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನ ಹಾಸನದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೆಜಿ 700 ಗ್ರಾಂ ಹಸಿ ಗಾಂಜಾ ಸೊಪ್ಪು ಹಾಗೂ 56 ಗ್ರಾಂ ಒಣಗಿರುವ ಗಾಂಜಾ ಸೊಪ್ಪು, 3 ಮೊಬೈಲ್ ಸೇರಿದಂತೆ ಒಂದು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಶಶಾಂಕ್, ಸಚಿನ್ ಹಾಗೂ ದಿಲೀಪ್ ಬಂಧಿತ ಆರೋಪಿಗಳಾಗಿದ್ದಾರೆ.. ಬಂಧಿತರು ದೊಡ್ಡಹೊನ್ನೇನಹಳ್ಳಿ ರಸ್ತೆಯ ರೈಲ್ವೆ ಟ್ರ್ಯಾಕ್ ಹಿಂಭಾಗದಲ್ಲಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದರೆಂಬ ವಿಷಯ ತಿಳಿದು ಬಂದ ಹಿನ್ನೆಲೆ. ಬಡಾವಣೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ. ಈ ಪ್ರಕರಣ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.