Publish Date: Mon, 20 Feb 2023 (14:58 IST)
Updated Date: Mon, 20 Feb 2023 (15:02 IST)
ರೋಹಿಣಿ ವಿಚಾರಕ್ಕೆ ಬಗ್ಗೆ ಮಾತನಾಡೋದಕ್ಕೆ ಡಿ ರೂಪಾ ಯಾರು? ಅವರು ಹೊಟ್ಟೆಕಿಚ್ಚಿಗೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. ರೂಪಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಫಾಲೋವರ್ಸ್ ಇದ್ದಾರೆ. ಅವರು ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ನಾನು ಕನ್ನಡಿಗ ನಾನು ಭಾರತಿಯ. ಆಂಧ್ರಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮದು ಸುಶಿಕ್ಷಿತ ಕುಟುಂಬವಾಗಿದ್ದು, ನಮ್ಮ ಕುಟುಂಬದ ಬಗ್ಗೆ ಎಲ್ಲ ಮಾತನಾಡುತ್ತಿದ್ದಾರೆ ಎಂದು ರೂಪಾ ವಿರುದ್ಧ ವಾಗ್ದಾಳಿ ನಡೆಸಿದರು. ರೋಹಿಣಿ ಸಿಂಧೂರಿಯ ಫೋಟೋಗಳೆಲ್ಲವೂ ಸಹಜ ಫೋಟೋಗಳಾಗಿದೆ. ನಾನು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದೆ. ತಂದೆ ತಾಯಿ ಇಲ್ಲೇ ಇರುವ ಕಾರಣ ನಾನು ಉದ್ಯೋಗ ತೊರೆದು ಬಂದಿದ್ದೇನೆ. ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಫೋಟೋಸ್‍ಗಳನ್ನು ತಗೆದುಕೊಂಡಿರುವ ಬಗ್ಗೆ ಅನುಮಾನ ಇದೆ. ಈ ಬಗ್ಗೆ ದೂರು ಕೊಡುತ್ತೇವೆ ಎಂದು ಹೇಳಿದರು.