Publish Date: Mon, 20 Feb 2023 (14:13 IST)
Updated Date: Mon, 20 Feb 2023 (14:24 IST)
ಸರ್ಕಾರಿ ಅಧಿಕಾರಿಗಳು,ನೌಕರರು ಮೀಡಿಯಾ ಮುಂದೆ ಬರಬಾರದು ಅಂತ ಇದೆ.ಅದಕ್ಕಾಗಿ ನಾನು ನಾನು ಮಾತನಾಡಿಲ್ಲ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ.
ರೂಪ ಅವ್ರು ಇಲ್ಲಸಲ್ಲದ ಆರೋಪಮಾಡಿದ್ದಾರೆ.ಸಿಎಸ್‌ಗೆ ದೂರು ಕೊಡಲು ಬಂದಿದ್ದೇನೆ,ದೂರು ನೀಡಿದ್ದೇನೆ. ಅವರ ಕಾರ್ಯವ್ಯಾಪ್ತಿನೆ ಬೇರೆ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ.ವೈಯಕ್ತಿಕ ಆರೋಪದ ಬಗ್ಗೆ ನನ್ನ ಗಂಡ ಮಾತನಾಡಿದ್ದಾರೆ.ನಾನು ಸಿಎಸ್‌ಗೆ ವರದಿ ನೀಡಿದ್ದೇನೆ.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಬಾರದು.ಏನು ಆಗ್ತಿದೆ ಅದನ್ನು ಹೇಳೋಕೆ ಸಿಎಸ್‌ಗೆ ಬಂದಿದ್ದೆ.ಎಲ್ಲವನ್ನೂ ಹೇಳಿದ್ದೇನೆ
ಮುಖ್ಯ ಕಾರ್ಯದರ್ಶಿಗೆ ದೂರಿನ ಪ್ರತಿ ಕೊಟ್ಟಿರುವುದಾಗಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.