Publish Date: Sat, 12 Sep 2020 (14:25 IST)
Updated Date: Sat, 12 Sep 2020 (14:27 IST)
ಮಹಿಳೆಯರಿಂದ ಲಂಚಕ್ಕೆ ಬೇಡಿಯಿಟ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
ಹಾವೇರಿ ಜಿಲ್ಲಾಡಳಿತ ಭವನದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ನಾಲ್ವರು ನೌಕರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಐವರು ಮಹಿಳಾ ಫಲಾನುಭವಿಗಳಿಗೆ ಸಹಾಯಧನದಲ್ಲಿ ಭೂಮಿ ನೀಡುವ ಸಂಬಂಧ, ಅನುಮೋದನೆ ನೀಡಲು ಅಧಿಕಾರಿಗಳು ಒಟ್ಟು 75 ಸಾವಿರ ರೂ. ಲಂಚ ಕೇಳಿದ್ದರು.
ಈ ಸಂಬಂಧ ರಾಣೆಬೆನ್ನೂರು ತಾಲ್ಲೂಕು ಪದ್ಮಾವತಿಪುರದ ಸಿದ್ದಪ್ಪ ಲಮಾಣಿ ದೂರು ನೀಡಿದ್ದರು.
25 ಸಾವಿರ ರೂ. ಲಂಚ ಪಡೆಯುತ್ತಿದ್ದ ಎಫ್‌ಡಿಎ ತಿಪ್ಪೇಸ್ವಾಮಿಯನ್ನು ಎಸಿಬಿ ಡಿವೈಎಸ್ಪಿ ಸೋಮಲಿಂಗ ಕುಂಬಾರ ನೇತೃತ್ವದಲ್ಲಿ ಬಂಧಿಸಲಾಯಿತು.
ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ್, ಫೀಲ್ಡ್ ಆಫೀಸರ್ ದಾಮೋದರ್, ಎಫ್‌ಡಿಎ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.