Publish Date: Sat, 12 Sep 2020 (14:02 IST)
Updated Date: Sat, 12 Sep 2020 (14:03 IST)
ಬೆಂಗಳೂರು : ಡ್ರಗ್ಸ್ ಆರೋಪ ಸಾಬೀತಾದರೆ ತನ್ನ ಎಲ್ಲಾ ಆಸ್ತಿಯನ್ನು ಬರೆದುಕೊಡ್ತೇನೆ ಎಂದ ಶಾಸಕ ಜಮೀರ್ ಅಹ್ಮದ್ ಅವರನ್ನು ಶಾಸಕ ರಾಮದಾಸ್ ಕಾಲೆಳೆದಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ನನ್ನ ಮೇಲಿನ ಆರೋಪ ಸಾಬೀತುಪಡಿಸಿದರೆ ನನ್ನ ಎಲ್ಲಾ ಆಸ್ತಿಯನ್ನು ಬರೆದುಕೊಡುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಈ ಹೇಳಿಕೆ ಕುರಿತು ಮಾತನಾಡಿದ ಶಾಸಕ ರಾಮದಾಸ್ ಅವರು, ಯುಡಿಯೂರಪ್ಪ ಅವರು ಸಿಎಂ ಆದರೆ ಅವರ ಮನೆಯ ಮುಂದೆ ನಾನು ವಾಚ್ ಮ್ಯಾನ್ ಆಗುತ್ತನೆ ಎಂದು ಹೇಳಿ ವರ್ಷಗಳೇ ಕಳೆದಿದೆ. ಇನ್ನು ಸಂಜನಾ ಜೊತೆ ಕೊಲಂಬೋ ಹೋಗಿದ್ದು ಸಾಬೀತಾದರೆ ನೀವು ಆಸ್ತಿ ಬರೆದುಕೊಡ್ತೀರಾ ಎಂದು ಜಮೀರ್ ಅಹ್ಮದ್ ಅವರನ್ನು ವ್ಯಂಗ್ಯ ಮಾಡಿದ್ದಾರೆ.