Publish Date: Sun, 05 May 2019 (18:38 IST)
Updated Date: Sun, 05 May 2019 (18:39 IST)
ರಾಜಾರೋಷವಾಗಿ ಕಳ್ಳರು ಮನೆಗಳನ್ನು ದರೋಡೆ ಮಾಡುತ್ತಿದ್ದಾರೆ. ಇದು ಜನರ ನಿದ್ರೆ ಹಾರಿಹೋಗುವಂತೆ ಮಾಡುತ್ತಿದೆ.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೆರೂರು ಗ್ರಾಮದ ರಾಜಣ್ಣ ಎಂಬುವರ ಮನೆ ದರೋಡೆ ಮಾಡಿದ್ದಾರೆ ಕಳ್ಳರು. ಇಬ್ಬರು ಮುಸುಕುಧಾರಿ ಕಳ್ಳರು ಬೈಕ್ ನಲ್ಲಿ ಬಂದು ದರೋಡೆ ಮಾಡಿದ್ದಾರೆ. ಎಲ್ ಸಿ ಡಿ ಟಿವಿ, 75 ಸಾವಿರ ರೂ. ದರೋಡೆ ಮಾಡಿದ್ದಾರೆ.
ಅದೇ ಗ್ರಾಮದ ಶೇಖರ್ ಎಂಬುವರ ಮನೆ ಬೀಗ ಮುರಿದು ಕನ್ನ ಹಾಕಿದ್ದಾರೆ. ತಡರಾತ್ರಿ ಕಿಟ್ಟದ ಗುಪ್ಪೆ ರಸ್ತೆಯಲ್ಲಿ 8 ಚೀಲ ಅಡಿಕೆ ಕದ್ದಿದ್ದಾರೆ ಖದೀಮರು. ಶಿವಣ್ಣ ಎಂಬುವರಿಗೆ ಸೇರಿದ ಅಡಿಕೆ ಚೀಲಗಳನ್ನು ಕದ್ದಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಕಳ್ಳತನ ಈ ಭಾಗದ ಜನರು ರಾತ್ರಿ ನಿದ್ರೆ ಮಾಡದಂತೆ ಮಾಡಿದೆ. ಕಳ್ಳರ ಹಾವಳಿಯಿಂದ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.