Publish Date: Sun, 05 May 2019 (18:29 IST)
Updated Date: Sun, 05 May 2019 (18:31 IST)
ಒಂದೇ ದೇವರಿಗೆ ಎರಡು ಬೀಗ ಹಾಕಿದ ಘಟನೆ ನಡೆದಿದೆ.
ಪೂಜಾರಿಗಳಿಬ್ಬರ ಕಿತ್ತಾಟದಲ್ಲಿ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಪೂಜೆ ಮಾಡುವ ವಿಚಾರದಲ್ಲಿ ಪೂಜಾರಿಗಳ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ಹೀಗಾಗಿ ಒಂದೇ ದೇವಸ್ಥಾನಕ್ಕೆ ಎರಡು ಬೀಗ ಜಡಿದಿದ್ದಾರೆ ಪೂಜಾರಿಗಳು.
ವಿಜಯಪುರ ನಗರದ ಗೋಳಗುಮ್ಮಟದ ಹತ್ತಿರ ಇರುವ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಘಟನೆ ನಡೆದಿದೆ. ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಚಿನ್ನಕಾಳಿಮಠ ಹಾಗೂ ನಂದಿಕೋಲ ಕುಟುಂಬಗಳ ನಡುವೆ ಗಲಾಟೆ ನಡೆದಿದೆ.
ಚಿನ್ನಕಾಳಿಮಠ ಹಾಗೂ ನಂದಿಕೋಲ ದೇವಸ್ಥಾನದ ಪೂಜಾರಿಕೆ ಕುಟುಂಬಗಳಾಗಿವೆ. ಒಂದು ತಿಂಗಳ ತನ್ನ ಅವಧಿ ಬಳಿಕ ಇನ್ನೊಂದು ಕುಟುಂಬಕ್ಕೆ ಪೂಜೆಗೆ ಅವಕಾಶವನ್ನು ನಂದಿಕೋಲ ಕುಟುಂಬದವರು ಮಾಡಿಕೊಡಲಿಲ್ಲ. ಹೀಗಾಗಿ ಇಂದು ಪೂಜೆ ಮಾಡದೇ ಬೀಗ ಜಡಿದಿದ್ದಾರೆ ಪೂಜಾರಿಗಳು.