Webdunia - Bharat's app for daily news and videos

Install App

‘ಎಲ್ಲಿದ್ದೀಯಪ್ಪಾ ಕುಮಾರಸ್ವಾಮಿ?’

Webdunia
ಬುಧವಾರ, 10 ಆಗಸ್ಟ್ 2022 (15:38 IST)
ಸರ್ಕಾರ ಜನರ ಪರ ಸರ್ಕಾರವಾಗಿದೆ ಹೊರತು ಇದು ಯಾವುದೋ ಕಾಂಗ್ರೆಸ್, ಜೆಡಿಎಸ್​​​​ನಂತೆ ಖಾಸಗಿ ಕಂಪನಿಯಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. ಅಧಿವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಎಲ್ಲಿದ್ಯಪ್ಪ ಕುಮಾರಸ್ವಾಮಿ..? ಎಂದು ಲೇವಡಿ ಮಾಡಿದರು. ಅಧಿವೇಶನ ಇದ್ದಾಗಲೇ ಕುಮಾರಸ್ವಾಮಿ ಸದನಕ್ಕೆ ಬರೋದಿಲ್ಲ. ಆಮೇಲೆ ಎಲ್ಲಿದ್ಯಪ್ಪ ಕುಮಾರಸ್ವಾಮಿ ಅಂತ ಹುಡುಕಬೇಕು. ಸದನ ಕರೆಯಿರಿ ಅನ್ನೋದು, ಆಮೇಲೆ ಬರದೆ ಇರೋದು. ಸಿದ್ದರಾಮಯ್ಯ ಮಾತಿನಂತೆ ಬಾಯಿಗೆ ಬಂದಂತೆ ದಿಕ್ಕು ಇಲ್ಲದಂತೆ ಗುಂಡು ಹೊಡೆಯುತ್ತಿದ್ದಾರೆ ಎಂದರು. ರಾಮನಗರ ಜಿಲ್ಲೆಯಲ್ಲಿ ನಾವು ಚೆನ್ನಾಗಿ ಕೆಲಸ ಮಾಡ್ತಿದ್ದೇವೆ ಎಂದ ಸಚಿವರು, ನಮ್ಮ ಪಕ್ಷ ನಮ್ಮ ಸರ್ಕಾರ ಜನ ಪರವಾಗಿರುವ ಸರ್ಕಾರ. ಇದು ಯಾವುದೋ, ಕಾಂಗ್ರೆಸ್, ಜೆಡಿಎಸ್ ನಂತೆ ಪ್ರೈವೆಟ್​ ಕಂಪನಿ ತರ ಅಲ್ಲ. ನಮ್ಮಲ್ಲಿ ಯಾರು ಏನು ಬೇಕಾದರೂ ಆಗಬಹುದು. ಆದರೆ ಅಲ್ಲಿ ಕುಟುಂಬಕ್ಕಷ್ಟೇ ಅಧಿಕಾರ. ಸೋನಿಯಾ ಗಾಂಧಿ ಕಂಪನಿ, ರಾಹುಲ್ ಗಾಂಧಿ ಕಂಪನಿ, ಪ್ರಿಯಾಂಕಾ ಗಾಂಧಿ ಕಂಪನಿ. ರಾಮನಗರದಲ್ಲಿ ಕುಮಾರಸ್ವಾಮಿದು ಒಂದು ಕಂಪನಿ. ಈ ಸಮಾಜದಲ್ಲಿ ಯಾವುದಾದರೂ ಅರ್ಥ ಇಲ್ಲದೆ ಇರೋ ಪಕ್ಷಗಳು ಅಂದರೆ ಇವುಗಳೇ. ಬರುವ ಚುನಾವಣೆಯಲ್ಲಿ ರಾಮನಗರದಲ್ಲಿ ನಾವು ಮೆಜಾರಿಟಿನೇ ತೆಗೆದುಕೊಳ್ತೇವೆ. ಅಲ್ಲಿ ಎಲ್ಲ ತರ ಇದ್ದಾರೆ, ಬಂಡೆ ಜೊತೆ ಕುಮಾರಸ್ವಾಮಿನೂ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿಕೆಟ್ ಇಲ್ಲ ಎಂದು ರೈಲ್ವೇ ಸಿಬ್ಬಂದಿ ಹೀಗೆ ನಡೆದುಕೊಳ್ಳೋದು ಸರೀನಾ Video

ಲಂಚ ಸಾರ್ ಲಂಚ.. B ಖಾತೆಯಿಂದ A ಖಾತೆಗೆ ವರ್ಗಾಯಿಸಲು ಜಿಬಿಎ ಅಧಿಕಾರಿಗಳ ಲಂಚ: ಕ್ಲಾಸ್ ತೆಗೆದುಕೊಂಡ ಜನ Video

ಇನ್ನೂ ನಿಂತಿಲ್ಲ ಶಾಸಕರ ಅಸಮಾಧಾನ: ಒಳಗೊಳಗೇ ನಡೆಯುತ್ತಿದೆಯಾ ಕಾರ್ಯತಂತ್ರ

ಬಿಟ್ಟು ಹೋಗ್ಬೇಡಿ ಸಾರ್.. ಟ್ರಾನ್ಸಫರ್ ಆದ ಶಿಕ್ಷಕನ ತಡೆಯಲು ಶಾಲೆ ಗೇಟ್ ಬಾಗಿಲು ಹಾಕಿದ ವಿದ್ಯಾರ್ಥಿಗಳು Video

ಮುಂದಿನ ಸುದ್ದಿ
Show comments