Publish Date: Mon, 08 Aug 2022 (19:45 IST)
Updated Date: Mon, 08 Aug 2022 (19:49 IST)
ನಿನ್ನೆಯ ಮೈಸೂರು ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜೆಡಿಎಸ್ ಕೊಡುಗೆ ಏನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ರು. ಇದಕ್ಕೆ ತಿರುಗೇಟು ನೀಡಿರೋ ಹೆಚ್ಡಿಕೆ, ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದು ಸೂತ್ರಧಾರನ ಕೊಡುಗೆ ಏನು.? ಎಂದು ಪ್ರಶ್ನಿಸಿದ್ದಾರೆ. ವಿಕಿಪೀಡಿಯ ಪ್ರಕಾರ ನಿಮ್ಮ ಜನ್ಮ ವರ್ಷ 1947. ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ರಾ ಮಿಸ್ಟರ್ ಸಿದ್ದರಾಮಯ್ಯ..? ಎಂದು ಅಪಹಾಸ್ಯ ಮಾಡಿದ್ದಾರೆ. ನಿಮಗೂ ಕಾಂಗ್ರೆಸ್ಗೂ ಏನೂ ಸಂಬಂಧ. ಗೆದ್ದಲು ಕಟ್ಟಿಕೊಂಡ ಹುತ್ತಕ್ಕೆ ಹಾವಿನಂತೆ ಸೇರಿಕೊಂಡವರು ನೀವು ಆ ಪಕ್ಷದ ಮೂಲ ನಾಯಕರನ್ನ ನುಂಗುತ್ತಿರುವ ನಿಮ್ಮ ಭಕಾಸುರ ಬಾಯಲ್ಲಿ ಸ್ವಾತಂತ್ರ್ಯ ಹೋರಾಟದ ಪಾರಾಯಣವೇ..? ಎಂದು ಲೇವಡಿ ಮಾಡಿದ್ದಾರೆ.