Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

‘ಹೊಸ ವರ್ಷ ಆಚರಿಸೋವಾಗ ಬಾಲ ಬಿಚ್ಚಿದರೆ ಹುಷಾರ್’

‘ಹೊಸ ವರ್ಷ ಆಚರಿಸೋವಾಗ ಬಾಲ ಬಿಚ್ಚಿದರೆ ಹುಷಾರ್’
ಹುಬ್ಬಳ್ಳಿ , ಸೋಮವಾರ, 30 ಡಿಸೆಂಬರ್ 2019 (19:06 IST)
ಹೊಸ ವರ್ಷದ ಆಚರಣೆ ಹೆಸರಲ್ಲಿ ನೈತಿಕ ಪೊಲೀಸ್ ಗಿರಿ ಮಾಡುವ ಮೂಲಕ ಅನೈತಿಕ ವರ್ತನೆ ಕಂಡುಬಂದರೆ
ಹುಷಾರ್.

ಅಕ್ರಮ ಹಾಗೂ ಅನೈತಿಕ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಹೀಗಂತ ಹುಬ್ಬಳ್ಳಿ – ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್.ದೀಲಿಪ್ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷವನ್ನು ಸಂತೋಷದಿಂದ ಆಚರಣೆ ಮಾಡಿ ಯಾವುದೇ ಅವಘಡಗಳು ಸಂಭವಿಸಿದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

ಯಾವುದೇ ಸಂಘಟನೆಗಳ ಹೆಸರಲ್ಲಿ ಹೋಗಿ ಸಾರ್ವಜನಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದರೇ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಹೊಟೇಲ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟಗಳಿಗೆ ಮಾಹಿತಿ ನೀಡಲಾಗಿದೆ. ಸ್ಪೇರ್ ಆ್ಯಂಡ್ ಕ್ಯಾಬ್ ವ್ಯವಸ್ಥೆ ಮಾಡುವ ಮೂಲಕ ಕುಡಿದ ಅಮಲಿನಲ್ಲಿರುವ ಗ್ರಾಹಕರನ್ನು ಮನೆಗೆ ಕಳಿಸುವಂತ ಕಾರ್ಯವನ್ನು ಮಾಡಬೇಕು ಒಂದು ವೇಳೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಗೋಲಿಬಾರ್, ಗಲಭೆ ಕೇಸ್ – ನ್ಯಾಯಾಂಗ ತನಿಖೆ ಶುರು