Publish Date: Thu, 26 Dec 2019 (13:09 IST)
Updated Date: Thu, 26 Dec 2019 (13:12 IST)
ಬೆಂಗಳೂರು : ಮಂಗಳೂರು ಹಿಂಸಾಚಾರ ಯಶಸ್ವಿಯಾಗಿ ಹತ್ತಿಕ್ಕಿದ ಹಿನ್ನಲೆ ಮಂಗಳೂರು ಪೊಲೀಸರಿಗೆ ಸರ್ಕಾರದಿಂದ ಬಹುಮಾನ ನೀಡಲಾಗಿದೆ.
ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವೇಳೆ ಹಿಂಸಾಚಾರ ತಡೆಯಲು ಶ್ರಮಿಸಿದ ಪೊಲೀಸರಿಗೆ ಬಹುಮಾನ ನೀಡಲಾಗಿದೆ.
149 ಪೊಲೀಸರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ಡಿಸಿಪಿ, ಎಸಿಪಿ, ಪಿಐ, 8 ಅಧಿಕಾರಿಗಳಿಗೆ ತಲಾ 50 ಸಾವಿರ ನೀಡಲಾಗಿದೆ. ಹಾಗೇ ಕದ್ರಿ ಪಿಐ ಶಾಂತಾರಾಮ್ ಗೂ 10 ಸಾವಿರ ರೂ. ಬಹುಮಾನ ನೀಡಲಾಗಿದೆ.