ಕರ್ಕಶವಾಗಿ ಶಬ್ದ ಹೊರಡಿಸೋ ಬೈಕ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಕರ್ಕಶ ಶಬ್ದ ಮಾಡುವ ಮೂಲಕ ಶಬ್ದ ಮಾಲಿನ್ಯವನ್ನು ಸೃಷ್ಟಿಸುವ ಬೈಕ್ ಗಳಿಗೆ ನಿಯಂತ್ರಣ ಹೇರುವ ಸದುದ್ದೇಶದಿಂದ ಹು-ಧಾ ಮಹಾನಗರ ಪೊಲೀಸ್ ಆಯುಕ್ತರ ನಿರ್ದೇಶನದಲ್ಲಿ ಪೊಲೀಸ್ ಕಾರ್ಯಾಚರಣೆ ಮಾಡುವ ಮೂಲಕ ಬೈಕ್ ಸವಾರರಿಗೆ ಪೊಲೀಸ್ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಡಿ.22ರಿಂದ 27ರ ವರೆಗೆ ಪೊಲೀಸ್ ಆಯುಕ್ತರಾದ ಆರ್ ದೀಲಿಪ್, ಕಾನೂನು ಸುವ್ಯವಸ್ಥೆ ಡಿಸಿಪಿ ಡಿ.ಎಲ್.ನಾಗೇಶ,ಸಹಾಯಕ ಪೊಲೀಸ್ ಆಯುಕ್ತ ಎಸ್.ಎಂ.ಸಂದಿಗವಾಡ ನೇತೃತ್ವದಲ್ಲಿ ಹು-ಧಾ ಮಹಾನಗರದಲ್ಲಿ ಕರ್ಕಶ ಶಬ್ದ ಮಾಡುವ ಬೈಕ್ ಸೈಲೆನ್ಸರಗಳನ್ನು ವಶಕ್ಕೆ ಪಡೆಯುವ ಮೂಲಕ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಒಟ್ಟು 140 ಸೈಲೆನ್ಸರ್ ವಶಕ್ಕೆ ಪಡೆದ ಅಧಿಕಾರಿಗಳು ಒಂದೇ ವಾರದಲ್ಲಿ 14 ಸೈಲೆನ್ಸರ್ ವಶಪಡಿಸಿಕೊಂಡಿದ್ದು, ಎಂ.ವ್ಹಿ ಕಾಯ್ದೆ ಅಡಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.