ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದರ ಹಿಂದೆ ರಾಜಕೀಯ ಹಸ್ತಕ್ಷೇಪ ಇಲ್ಲ.
ಹೀಗಂತ ವಿರೋಧ ಪಕ್ಷದ ನಾಯಕರ ಆರೋಪವನ್ನು ಕೇಂದ್ರ ಸಂಸದಿಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಷಿ ತಳ್ಳಿ ಹಾಕಿದ್ದಾರೆ.
ಇತ್ತೀಚೆಗೆ ಕೊರೊನಾದಿಂದ ನಿಧನರಾದ ರಾಜ್ಯ ಸಭಾ ಸದಸ್ಯ ಅಶೋಕ ಗಸ್ತಿ ಅವರ ನಿವಾಸಕ್ಕೆ ಆಗಮಿಸಿ, ಕುಟುಂಬಸ್ಥರ ಜೊತೆ ಮಾತನಾಡಿ ಸಾಂತ್ವಾನ ಹೇಳಿದರು.
ಆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಯಾವುದೇ ತನಿಖಾ ಸಂಸ್ಥೆ ದಾಳಿ ಮಾಡುವ ಮುನ್ನ ಸುದೀರ್ಘವಾಗಿ ಅಧ್ಯಯನ ನಡೆಸಿಯೇ ದಾಳಿ ಮಾಡುತ್ತದೆ ಎನ್ನುವ ಪ್ರಜ್ಞೆ ಅಗತ್ಯವಾಗಿದೆ. ಇಡಿ, ಸಿಬಿಐ ದಾಳಿಯಾದ ತಕ್ಷಣ ಅನುಮಾನ ವ್ಯಕ್ತಪಡಿಸಿ ರಾಜಕೀಯ ದುರುದ್ದೇಶ, ಅಧಿಕಾರ ದುರ್ಬಳಕೆ ಎಂದು ಆರೋಪಿಸುವುದು ಸರಳವಾಗಿ ಬಿಟ್ಟಿದೆ ಎಂದರು.
ಡಿ.ಕೆ. ಶಿವಕುಮಾರ ರಾಜಕೀಯಕ್ಕೆ ಬರುವ ಮುನ್ನ ಏನಿದ್ದರೂ, ಈಗೇನಿದ್ದಾರೆ ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಒಂದಾಗಿದ್ದಾಗಲೆ ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಈಗಲೂ ಗೆಲ್ಲುತ್ತೇವೆ ಎಂದರು.