Publish Date: Wed, 21 Oct 2020 (14:30 IST)
Updated Date: Wed, 21 Oct 2020 (14:33 IST)
ಶಿರಾ: ಶಿರಾ ಚುನಾವಣೆ ಹಿನ್ನಲೆಯಲ್ಲಿ ಶಿರಾ ಅಖಾಡಕ್ಕೆ ಇದೀಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಳಿದಿದ್ದಾರೆ.
ಈ ಬಗ್ಗೆ ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 1 ರವರೆಗೂ ಶಿರಾದಲ್ಲೇ ಇರುತ್ತೇನೆ. ಕೆಲಸ ಮಾಡೋಕೆ ಟೊಂಕಕಟ್ಟಿ ಬಂದಿದ್ದೇನೆ ಎಂದು ಹೇಳಿದ್ದಾರೆ.
ಹೆಚ್.ಡಿಕೆ ಕಣ್ಣೀರಿಗೆ ಕರಗಬೇಡಿ ಅನ್ನೋ ಸಿದ್ದು ಹೇಳಿಕೆ ವಿಚಾರದ ಮಾತನಾಡಿದ ಅವರು, ದೇವೇಗೌಡ ಕಣ್ಣೀರಿಂದಲೇ ಸಿದ್ದು ಡಿಸಿಎಂ ಆಗಿದ್ದು ಎಂದು ಟಾಂಗ್ ನೀಡಿದ್ದಾರೆ. ಹಾಗೇ ಜೆಡಿಎಸ್ ನಾಶಕ್ಕೆ ರಾಷ್ಟ್ರೀಯ ಪಕ್ಷಗಳು ಪಣತೊಟ್ಟಿವೆ. ಅವರಿಗೆ ತಕ್ಕ ಉತ್ತರ ನೀಡುವೆ ಎಂದು ಅವರು ಗುಡುಗಿದ್ದಾರೆ.