ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಇದೇ ಮೊದಲ ಸಲ ಸಲಹೆ ನೀಡಿದ್ದಾರೆ.
ಭಾರತ – ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ಕುರಿತು ಮೋದಿಗೆ ಸಲಹೆ ನೀಡಿದ್ದಾರೆ.
ಗಡಿ ವಿಚಾರದ ಬಗ್ಗೆ ಬಳಸುವ ಪದಗಳ ಕುರಿತು ಪ್ರಧಾನಿ ಯೋಚನೆ ಮಾಡಬೇಕು. ಮೋದಿ ಬಳಸುವ ಪದಗಳಿಂದ ಮುಂದೆ ಆಗಬಹುದಾದ ದುಷ್ಪರಿಣಾಮಗಳ ಕುರಿತು ಒಂದಷ್ಟು ಸಲ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.
ತಪ್ಪು ಮಾಹಿತಿ ಕೊಡುವುದು ಇಲ್ಲವೇ ರಾಜತಾಂತ್ರಿಕತೆ ಇಲ್ಲವೇ ನಿರ್ಣಾಯಕ ನಾಯಕತ್ವಕ್ಕೆ ಪರ್ಯಾಯವಾಗುವುದಿಲ್ಲ. ನಾವು ಈಗ ಐತಿಹಾಸಿಕ ಹಾದಿಯಲ್ಲಿದ್ದೇವೆ.
ಚೀನಾ ಕುರಿತು ನಮ್ಮ ಇಂದಿನ ನಿರ್ಧಾರವನ್ನು ನವ ಪೀಳಿಗೆ ಗಮನಿಸಲಿದೆ. ಹೀಗಾಗಿ ದೇಶದ ಭದ್ರತೆಗೆ ಧಕ್ಕೆ ತರುವಂತೆ ಯಾವುದೇ ನಡೆ ಇರಬಾರದು ಎಂದಿದ್ದಾರೆ.