Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾವಿನ ಲೆಕ್ಕ ಕೊಡದ ಸೇನೆ ವಿರುದ್ಧ ತಿರುಗಿಬಿದ್ದ ಚೀನಾ ಜನತೆ

ಸಾವಿನ ಲೆಕ್ಕ ಕೊಡದ ಸೇನೆ ವಿರುದ್ಧ ತಿರುಗಿಬಿದ್ದ ಚೀನಾ ಜನತೆ
ಬೀಜಿಂಗ್ , ಸೋಮವಾರ, 22 ಜೂನ್ 2020 (11:21 IST)
ಬೀಜಿಂಗ್: ಭಾರತದ ವಿರುದ್ಧ ಗಡಿ ಸಂಘರ್ಷದಲ್ಲಿ ಚೀನಾದ ಎಷ್ಟು ಸೈನಿಕರು ಸಾವನ್ನಪ್ಪಿದ್ದರು ಎಂಬ ಬಗ್ಗೆ ಅಲ್ಲಿನ ಸರ್ಕಾರ ಅಥವಾ ಸೇನೆ ಯಾವುದೇ ಅಧಿಕೃತ ಲೆಕ್ಕ ಕೊಟ್ಟಿಲ್ಲ. ಇದರ ಬಗ್ಗೆ ಈಗ ಅಲ್ಲಿನ ಜನರೇ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ.


ಭಾರತ ಘಟನೆ ನಡೆದ ತಕ್ಷಣವೇ ತನ್ನ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಘೋಷಿಸಿಕೊಂಡಿತ್ತು. ಆದರೆ ಚೀನಾ ತಮ್ಮ ಪಾಳಯಲ್ಲಿ ಎಷ್ಟು ಜನರಿಗೆ ಸಾವು-ನೋವುಗಳಾಗಿವೆ ಎಂಬ ವಿಚಾರವನ್ನು ಮುಚ್ಚಿಟ್ಟಿದೆ.

ಇದರ ಬಗ್ಗೆ ಆನ್ ಲೈನ್ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಪಿಎಎಲ್ ಇದುವರೆಗೆ ತನ್ನ ಸಾವು ನೋವಿನ ಲೆಕ್ಕವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಇದು ಪಾರದರ್ಶಕವಾಗಿ ಜನರಿಗೆ ಮಾಹಿತಿ ನೀಡಬೇಕು ಎಂದು ಆತಂಕ ವ್ಯಕ್ತಪಡಿಸಿರುವ ಚೀನಾ ಜನತೆ ಭಾರತ ತನ್ನ ಸೇನೆಯ ಬಗ್ಗೆ ಮುಚ್ಚುಮರೆಯಿಲ್ಲದೇ ಮಾಹಿತಿ ನೀಡಿರುವುದನ್ನು ಮೆಚ್ಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾ.ಪಂ.ಅಧ್ಯಕ್ಷ ಸ್ಥಾನ ದುರ್ಬಳಕೆ ಹಿನ್ನಲೆ; ಗ್ರಾ.ಪಂ.ಅಧ್ಯಕ್ಷೆಯ ವಿರುದ್ಧ ದೂರು