Publish Date: Fri, 17 Jul 2020 (12:14 IST)
Updated Date: Fri, 17 Jul 2020 (12:19 IST)
ಬೆಂಗಳೂರು : ಲಾಕ್ ಡೌನ್ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿದ್ದು, ಲಾಕ್ ಡೌನ್ ವಿಸ್ತರಣೆ ಬಗ್ಗೆ ಇದೀಗ ಡಿಸಿಎಂ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್, ಲಾಕ್ ಡೌನ್ ವಿಸ್ತರಣೆ ಇಲ್ಲ. ಸಿಎಂ ಕೆಲವು ಸಲಹೆ ಸೂಚನೆಗಳನ್ನು ನೀಡ್ತಾರೆ. ಬೆಂಗಳೂರಿನಲ್ಲಿ ಲಾಕ್ ಡೌನ್ ವಿಸ್ತರಣೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಲಾಕ್ ಡೌನ್ ಬೇಕು..! ಬೇಡ..! ಎಂದು ಲಾಕ್ ಡೌನ್ ಬಗ್ಗೆ ಪರ ವಿರೋಧ ಅಭಿಪ್ರಾಯ ಕೇಳಿಬರುತ್ತಿದೆ. ಲಾಕ್ ಡೌನ್ ಬಗ್ಗೆ ಸಿಎಂಗೆ ಚಿಂತನೆ ಇಲ್ಲ. ಡಿಸಿಎಂಗೂ ಲಾಕ್ ಡೌನ್ ವಿಸ್ತರಣೆ ಬೇಡ. ಆದರೆ ಬಿಬಿಎಂಪಿ ಮಾತ್ರ ಲಾಕ್ ಡೌನ್ ಪರವಾಗಿದ್ದಾರೆ. ಲಾಕ್ ಡೌನ್ ಬೇಕು ಎಂದು ಮೇಯರ್ ಹೇಳುತ್ತಿದ್ದಾರೆ. ಬೆಂಗಳೂರನ್ನು 14 ದಿನಗಳ ಕಾಲ ಲಾಕ್ ಡೌನ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಸಿಎಂ ಏನು ಹೇಳ್ತಾರೊ ಅದೇ ಫೈನಲ್ ಎನ್ನಲಾಗಿದೆ.