Publish Date: Fri, 05 Mar 2021 (11:54 IST)
Updated Date: Fri, 05 Mar 2021 (11:56 IST)
ಬೆಂಗಳೂರು : ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಾಗುವ ವಿಚಾರ ನಾನು ಜೆಡಿಎಸ್ ಪಕ್ಷ ಸೇರುತ್ತೇನೆ ಎಂದು ಎಲ್ಲಿ ಹೇಳಿದ್ದೆ? ಎಂದು ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೊತೆ ನನಗೆ ಎಂದೂ ಬೇಸರವಿರಲಿಲ್ಲ. ಕುಮಾರಸ್ವಾಮಿ, ದೇವೇಗೌಡರ ಜೊತೆಗೂ ಚೆನ್ನಾಗಿದ್ದೇನೆ. ಬಿಜೆಪಿ ನಾಯಕರು ನನ್ನ ಜೊತೆ ಚೆನ್ನಾಗಿದ್ದಾರೆ. ಅದರರ್ಥ ನಾನು ಕಾಂಗ್ರೆಸ್ ಪಕ್ಷ ಬಿಡುತ್ತೇನೆ ಎಂದಲ್ಲ. ರಾಜಕೀಯವಾಗಿ ನನ್ನ ನಿರ್ಧಾರ ಏನು ಎಂದು ದೆಹಲಿಗೆ ಹೋದ ಬಳಿಕ ಅಂತಿಮ ತೀರ್ಮಾನ ಹೇಳುತ್ತೇನೆ ಎಂದು ಹೇಳಿದ್ದಾರೆ.
ಇಲ್ಲಿ ಯಾರು ಯಾರಿಗೂ ಏನನ್ನೂ ಕೊಡಬೇಕಾಗಿಲ್ಲ. ನಮಗೆ ಬರಬೇಕಾದ್ದನ್ನು ಕೊಟ್ಟರೆ ಸಾಕು. 1ರೂ. ಹಾಕಿ 10ರೂ. ತಗೊಂಡು ಹೋಗುವವರಿದ್ದಾರೆ. ಹೆಸರು ಹೇಳದೆ ಜಮೀರ್ ಅಹ್ಮದ್ ಗೆ ಟಾಂಗ್ ನೀಡಿದ್ದಾರೆ. ನಾವು 1 ರೂಪಾಯಿ ಖರ್ಚು ಮಾಡಿ ಎಂಟಾಣೆ ಕೇಳುತ್ತಿದ್ದೇವೆ. ಕೆಲವರು ಏನೂ ಖರ್ಚು ಮಾಡದೆ 2 ರೂ. ಲಾಭ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.