Publish Date: Fri, 05 Mar 2021 (07:10 IST)
Updated Date: Fri, 05 Mar 2021 (07:12 IST)
ಬೆಂಗಳೂರು : ಬೆಳಿಗ್ಗೆ ಎದ್ದ ತಕ್ಷಣ ತುಂಬಾ ಕೆಲಸ ಕಾರ್ಯಗಳಿರುತ್ತದೆ. ಹಾಗಾಗಿ ಕೆಲವರು ಬೆಳಿಗ್ಗೆ 10 ಗಂಟೆಯ ನಂತರ ದೇವರ ಪೂಜೆ ಮಾಡುತ್ತಾರೆ. ಇದು ತಪ್ಪು ಹೀಗೆ ಮಾಡಬಾರದು. ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆ.
ಹಾಗಾಗಿ ಬೆಳಿಗ್ಗೆ ಬೇಗನೆ ದೇವರ ಪೂಜೆ ಮಾಡಿ. ಇದರಿಂದ ದೇವರ ಕೃಪೆ ನಿಮ್ಮ ಮೇಲಾಗುತ್ತದೆ. ಹಾಗೇ ದೇವರಿಗೆ ದೀಪ ಹಚ್ಚಿದ ಮೇಲೆ ಕಣ್ಣಿರು ಹಾಕಬೇಡಿ, ಇದರಿಂದ ದುರ್ಗಾದೇವಿ ಹಾಗೂ ಲಕ್ಷ್ಮಿದೇವಿಯ ಶಾಪಕ್ಕೆ ಗುರಿಯಾಗುತ್ತೀರಿ. ಬದಲಾಗಿ ಕಷ್ಟಗಳನ್ನು ಪರಿಹರಿಸುವ ಶಕ್ತಿ ಕೊಡು ಎಂದು ಬೇಡಿಕೊಳ್ಳಿ. ಆಗ ದೇವರು ನಿಮ್ಮ ಮೇಲೆ ಅನುಗ್ರಹ ತೋರುತ್ತಾನೆ.