Publish Date: Sun, 28 May 2023 (08:55 IST)
Updated Date: Sun, 28 May 2023 (08:07 IST)
ಬೆಂಗಳೂರು : ಅಸಮಾಧಾನ ಮಾಡಿಕೊಂಡರೆ ನಾನೇನು ಮಾಡಲು ಆಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಹಲವು ಶಾಸಕರಿಗೆ ಮಂತ್ರಿ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಾನು ಸಾಕಷ್ಟು ಬಾರಿ ಅವಕಾಶ ವಂಚಿತನಾಗಿದ್ದೆ. ಧರಂ ಸಿಂಗ್, ಸಿದ್ದರಾಮಯ್ಯ ಸಂಪುಟದಲ್ಲಿ ನನಗೂ ಸಿಕ್ಕಿರಲಿಲ್ಲ. ನಾನು ತಾಳ್ಮೆಯಿಂದ ಕಾದಿದ್ದೆ ಎಂದು ಉತ್ತರಿಸಿದರು.
ಮಂತ್ರಿ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಮಾಡಿಕೊಂಡರೆ ನಾನು ಏನು ಮಾಡಲು ಆಗುತ್ತೆ? ಮಾತನಾಡುವವರು ಮಾತನಾಡಲಿ. ನಾನೇನು ಮಾತನಾಡುವುದಿಲ್ಲ ಎಂದರು.