Publish Date: Thu, 04 May 2023 (20:00 IST)
Updated Date: Thu, 04 May 2023 (18:25 IST)
ಹಾಸನದ ಬೇಲೂರಿಗೆ ಭೇಟಿ ನೀಡಿದ್ದ ವೇಳೆ ಜೆಡಿಎಸ್ ಕಾಂಗ್ರೆಸ್ನ ಬಿ ಟೀಮ್ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ H.D. ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.. ಹಾಸನದ ಗಂಡಸಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಂದ ಇಂತಹ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ.. ಕಳೆದ ಬಾರಿ ಹಾಸನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನು ಹೇಳಿದ್ರು ನೆನಪಿದೆ ಅಲ್ವಾ? ಕಳೆದ ಬಾರಿ ಅವರು ಮಾಡಿದ ಕೆಲಸ ಈ ಬಾರಿ ಮೋದಿ ಮಾಡಿದ್ದಾರೆ.. ಇದರಲ್ಲಿ ವ್ಯತ್ಯಾಸ ಏನಿಲ್ಲ ಎಂದ್ರು.. ರಾಹುಲ್ ಓರ್ವ ಯುವಕ, ಮೋದಿ ಮೆಚ್ಯೂರ್ಡ್ ಮ್ಯಾನ್.. ರಾಹುಲ್ ಓರ್ವ ಯಂಗ್ ಸ್ಟಾರ್...ಮಾತಾಡಿದ್ರು. ಆದರೆ ಮೋದಿಯವರು ಪ್ರಧಾನಿಯಾದವರು, ಹತ್ತು ವರ್ಷ ಪ್ರಧಾನಿಯಾಗಿ ಈ ದೇಶ ಆಳಿದವರು.. ಜೆಡಿಎಸ್ ಬಗ್ಗೆ ಇಷ್ಟು ಹಗುರವಾಗಿ ಮಾತಾಡೋದು ಅವರಿಗೆ ಶೋಭೆ ತರೋದಿಲ್ಲ ಎಂದು ಮಾಜಿ ಪ್ರಧಾನಿ H.D.ದೇವೇಗೌಡ ಬೇಸರ ವ್ಯಕ್ತಪಡಿಸಿದ್ರು.