ಸರಕಾರದ ಹೊಂದಾಣಿಕೆಯಲ್ಲಿ ಮುಖ್ಯಮಂತ್ರಿಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೀಗಂತ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಹೊಂದಾಣಿಕೆಯಲ್ಲಿ ತೊಂದರೆ ಸಹಜ. ಆದರೂ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದಿದ್ದಾರೆ.
ಬೆಳಗಾವಿ ಸುವರ್ಣಸೌಧ ಸದ್ಬಳಕೆಗೆ ಸಂಬಂಧಪಟ್ಟಂತೆ ಸಿಎಂ ಹಾಗೂ ಸಚಿವರ ಸಭೆ ಕರೆದು ಚರ್ಚಿಸುವೆ ಎಂದಿದ್ದಾರೆ. ನನಗೂ ಕೂಡ ಮಂತ್ರಿಯಾಗುವ ಆಸೆ ಇತ್ತು. ಆದರೆ ಎಲ್ಲರಿಗೂ ಅವಕಾಶದ ದೃಷ್ಟಿಯಿಂದ ಹಿಂದೆ ಸರಿದೆ.
ರಾಜ್ಯದ ಹಿತಕ್ಕಾಗಿ ಸಭಾಪತಿಯಾಗಿದ್ದೇನೆ. ಸಭಾಪತಿಯಾಗಲೂ ನನಗೂ ಮನಸ್ಸಿರಲಿಲ್ಲ. ನಾನು ಶಿಕ್ಷಣ ಮಂತ್ರಿಯಾಗಬೇಕೆಂದು ಇಷ್ಟ ಪಟ್ಟಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.