ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದ ಬೆಲೆ ಏರಿಕೆ ಇಂದಿನಿಂದ ಜಾರಿಗೆ ಬರಲಿದ್ದು, ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಬೀಳಿದೆ.
ಪೆಟ್ರೋಲ್, ಡೀಸೆಲ್, ವಿದ್ಯುತ್ ಬೆಲೆ ಏರಿಕೆ ಇಂದಿನಿಂದ ಜಾರಿಗೆ ಬರಲಿದೆ. ಇದರ ಜತೆಗೆ ಸದ್ಯದಲ್ಲೇ ಹಾಲು, ತರಕಾರಿ ಬೆಲೆಗಳೂ ಗಗನಕ್ಕೇರಲಿವೆ. ಇದರೊಂದಿಗೆ ಶ್ರೀ ಸಾಮಾನ್ಯನ ಬದುಕು ಮತ್ತಷ್ಟು ಕಠಿಣವಾಗಲಿದೆ.
ರೈತರ ಸಾಲಮನ್ನಾ ಘೋಷಿಸಿದ್ದ ಸಿಎಂ ಅಲ್ಲಿ ವೆಚ್ಚವಾಗಿದ್ದ 34 ಸಾವಿರ ಕೋಟಿ ಹಣವನ್ನು ಬೇರೆ ವಸ್ತುಗಳ ಬೆಲೆ ಏರಿಕೆ ಮೂಲಕ ಸರಿದೂಗಿಸಲಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಸದ್ಯದಲ್ಲೇ ಬಿಎಂಟಿಸಿ ಬಸ್ ದರವೂ ಏರಿಕೆಯಾಗುವ ಸಂಭವವಿದೆ. ಹೀಗೇ ಮುಂದುವರಿದರೆ ಜನ ಸಾಮಾನ್ಯನ ಬದುಕು ಮತ್ತಷ್ಟು ತುಟ್ಟಿಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.