Publish Date: Thu, 22 Jun 2023 (16:02 IST)
Updated Date: Thu, 22 Jun 2023 (15:05 IST)
ಒತ್ತುವರಿ ತೆರವು ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದು,ತೆರವು ಮಾಡ್ತಾ ಹೋದಂತೆ ದೊಡ್ಡ ದೊಡ್ಡ ಸ್ಟ್ರಕ್ಚರ್‌ಗಳು ಗಮನಕ್ಕೆ ಬರ್ತಿದೆ.ಕಾಂಪೌಂಡ್ ಗೋಡೆ ಹಾಗು ಶೆಡ್ ಗಳನ್ನು ತೆರವು ಮಾಡ್ತಿದ್ದೇವೆ.ಯಲಹಂಕ, ಮಹದೇವಪುರ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಣ್ಣಪುಟ್ಟ ತೆರವು ಕಾರ್ಯಾಚರಣೆ ಮುಂದುವರೆದಿದೆ.ನಾವು ತೆರವು ಕಾರ್ಯಾಚರಣೆ ನಿಲ್ಲಿಸಿಯೇ ಇಲ್ಲ.ಸ್ಟೇ ಇರೋ ಪ್ರಕರಣಗಳಲ್ಲಿ ತೆರವು ಇಲ್ಲ.ಉಳಿದ ಎಲ್ಲ ಕಡೆಗಳಲ್ಲಿ ನಾವು ಕೆಲಸ ಮುಂದುವರೆಸುತ್ತಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.