Publish Date: Thu, 22 Jun 2023 (15:53 IST)
Updated Date: Thu, 22 Jun 2023 (14:57 IST)
ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿ ಮಾರ್ಗಸೂಚಿ ವಿಚಾರವಾಗಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದು,ಬೀದಿ ನಾಯಿ ಹಾವಳಿ ಜಾಸ್ತಿಯಾಗಿದೆ.ಬೇರೆ ಬೇರೆ ರಾಷ್ಟ್ರೀಯ ಸಂಸ್ಥೆ ಸರ್ವೆ ಮಾಡಬೇಕು.ಬೀದಿ ನಾಯಿ ಪತ್ತೆ ಹಚ್ಚುವ ಕಾರ್ಯವಾಗ್ತಿದೆ.ಕೆನಲ್ ಸಂಖ್ಯೆ ಹೆಚ್ಚಳ ಮಾಡೋದಕ್ಕೆ ಕ್ರಮವಾಗ್ತಿದೆ.ಸಂತಾನ ಹರಣ, ಆಪರೇಷನ್‌ಗೆ ಬಜೆಟ್ ನಲ್ಲಿ ಕೂಡ ಹಣ ಇಟ್ಟಿದ್ದೇವೆ.ಮಾನ್ಯತೆ ಇರುವ ಸಂಸ್ಥೆ ಮಾತ್ರ ಸಂತಾನಹರಣ ಮಾಡಬೇಕು ಅಂತ ಇದೆ.ಇದರ ಬಗ್ಗೆ ನಾವು ಪತ್ರ ವ್ಯವಹಾರ ಕೂಡ ಮಾಡ್ತಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.