Publish Date: Fri, 02 Jun 2023 (16:50 IST)
Updated Date: Fri, 02 Jun 2023 (17:05 IST)
ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳನ್ನ ಮಾಡಿದ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅಕ್ಕಿ ಕೂಡ ಮುಂದಿನ ತಿಂಗಳಿಂದ ಆಗಲಿದೆ.ಗೃಹ ಲಕ್ಷ್ಮಿ ಯೋಜನೆ ಕೂಡ ಜಾರಿ ಆಗಲಿದೆ.ಮನೆ ಯಜಮಾನಿ ಯಾರು ಅಂತ ಅವರೇ ತೀರ್ಮಾನ ಮಾಡಲಿ,ಬೆಲೆ ಏರಿಕೆ ಗಮನದಲ್ಲಿ ಇಟ್ಟುಕೊಂಡು ಇದನ್ನು ಮಾಡ್ತಾ ಇದ್ದೀವಿ.ಒಂದು ತಿಂಗಳು ಅವಕಾಶ ಇರಲಿದೆ.ನಮಗೆ ಬೇಡ ಅಂತ ಅನೇಕರು ಕಾಗದ ಬರೆದಿದ್ದಾರೆ.ಅವರದ್ದೇ ಆದ ಖಾತೆ ಇರಬೇಕು.ಆಗಸ್ಟ್ 15 ರಂದು ನಾವು ಇದನ್ನು ಲಾಂಚ್ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನೂ ಇಂದು ಇಡೀ ದೇಶಕ್ಕೆ ಐತಿಹಾಸಿಕ ದಿನಬಸವಣ್ಣನ ನಾಡು ಇದು, ಕುವೆಂಪು ನಾಡು ಇದು.ನುಡಿದಂತೆ ನಡೆಯಬೇಕಾದ್ದು ನಮ್ಮ ಧರ್ಮ.ಐದು ಗ್ಯಾರಂಟಿ ಮಾಡ್ತೀವಿ ಅಂದಿದ್ದೆವು ಮಾಡಿದ್ದೇವೆ.ಐದು ಗ್ಯಾರಂಟಿ ಗಳಿಗೂ ಟೈಂ ಲೈನ್ ಕೊಟ್ಟಿದ್ದೇವೆ.ಉಚಿತ ಬಸ್ ಪ್ರಯಾಣ 11 ತಾರೀಕು ಲಾಂಚ್ ಆಗಲಿದೆಜುಲೈ ಒಂದರಿಂದ ಕರೆಂಟ್ ಬಿಲ್ ಇಲ್ಲ.100 ಯುನಿಟ್ ಮಾಡ್ತಾ ಇದ್ದವರು 200 ತನಕ ಹೋಗೋ ಹಾಗಿಲ್ಲ.10 ಪರ್ಸೆಂಟ್ ಹೆಚ್ಚು ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.