Publish Date: Fri, 01 Sep 2023 (17:30 IST)
Updated Date: Fri, 01 Sep 2023 (20:13 IST)
ಇಂದು ಸುಪ್ರೀಂ ಕೋರ್ಟ್ನಲ್ಲಿ ಕಾವೇರಿ ಅರ್ಜಿ ವಿಚಾರಣೆ ನಡೆಯಲಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ಕಾನೂನಾತ್ಮಕ ಸಭೆ ಮಾಡಿದ್ದಾರೆ. ನಮಗೆ ನೀರಿಲ್ಲ, ಇನ್ನು ತಮಿಳುನಾಡಿಗೆ ಕೊಡೋದು ಎಷ್ಟು ಸೂಕ್ತ ಎಂದು ಪ್ರಾಧಿಕಾರಕ್ಕೆ ನಾವು ಕೂಡ ಮನವಿ ಮಾಡಿದ್ದೇವೆ. ಸರ್ವಪಕ್ಷ ನಿಯೋಗ ಹೋಗಲು ನಾವು ರೆಡಿ ಇದ್ದೀವಿ ಎಂದು ತಿಳಿಸಿದ್ದಾರೆ.