ಪತ್ನಿ ಹಾಗೂ ನಾದಿನಿಗೆ ಗುಂಡಿಕ್ಕಿ ಕೊಂದ ಬಳಿಕ ಯೋಧನೊಬ್ಬ ತಾನೂ ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ.
ಪಾಟ್ನಾದಲ್ಲಿ ಘಟನೆ ನಡೆದಿದ್ದು, ರಜೆ ಮೇಲೆ ಮನೆಗೆ ಬಂದಿದ್ದ ಯೋಧ ವಿಷ್ಣುಕುಮಾರ ಶರ್ಮಾ (34) ಈ ಕೆಲಸ ಮಾಡಿದ್ದಾರೆ.
ಮಕ್ಕಳೆದುರಲ್ಲೇ ಪತ್ನಿ ದಾಮನಿ ಹಾಗೂ ನಾದಿನಿ ಡಿಂಪಲ್ ಮೇಲೆ ಗುಂಡು ಹಾರಿಸಿ ಕೊನೆಗೂ ತಾನೂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾವ ಕಾರಣಕ್ಕೆ ಘಟನೆ ನಡೆದಿದೆ ಎಂಬುದಕ್ಕಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.