Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರನ ನಿರ್ಧಾರ ಏನೆಂದು ತಿಳಿಯುವ ಕುತೂಹಲದಲ್ಲಿರುವಾಗಲೇ ಕೆಲವೆಡೆ ಮತ ಎಣಿಕೆ ವಿಳಂಬವಾದ ಸುದ್ದಿ ಬಂದಿದೆ.
ಚಾಮರಾಜ ನಗರದಲ್ಲಿ ಅಧಿಕಾರಿಗಳ ನಡುವೆ ಎಣಿಕೆ ಕುರಿತ ಗೊಂದಲದಿಂದಾಗಿ ಮತ ಎಣಿಕೆ ಕಾರ್ಯ ಇನ್ನೂ ಆರಂಭವಾಗಿಲ್ಲ.
ಇನ್ನು, ಯಾದಗಿರಿ, ಬೀದರ್ ನಲ್ಲೂ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಮತ ಎಣಿಕೆಯಲ್ಲಿ ವಿಳಂಬ ಕಂಡುಬಂದಿದೆ. ಉಳಿದಂತೆ ಎಲ್ಲಾ ಕಡೆ ಮತ ಎಣಿಕೆ ಕಾರ್ಯ ನಿರಾತಂಕವಾಗಿ ಸಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.