ಬೆಂಗಳೂರು: ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯದ ನೂತನ ಸಾರಥಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಮತದಾರ ಬರೆದಿರುವ ರಾಜಕಾರಣಿಗಳ ಭವಿಷ್ಯ ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.
ಇದುವರೆಗೆ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಸಿಎಂ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿತ್ತು. ಆದರೆ ಒಂದು ವೇಳೆ ಕಾಂಗ್ರೆಸ್ ಗೆ ಬಹುಮತ ಬಾರದೇ ಮೈತ್ರಿ ಸರ್ಕಾರ ರಚಿಸುವ ಹಾಗಾದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವುದು ಡೌಟು.
ಕಾಂಗ್ರೆಸ್ ಜೆಡಿಎಸ್ ಬೆಂಬಲ ಕೋರಬೇಕಾದರೆ, ಜೆಡಿಎಸ್ ನಾಯಕರು ಬಹುಶಃ ಇದೇ ಬೇಡಿಕೆ ಮುಂದಿಡಬಹುದು. ಜೆಡಿಎಸ್ ನಾಯಕರ ಮೇಲೆ ಚುನಾವಣೆ ಪ್ರಚಾರ ಸಂದರ್ಭದಲ್ಲೇ ಸಿದ್ದರಾಮಯ್ಯ ವಾಚಮಗೋಚರವಾಗಿ ಟೀಕೆ ಮಾಡಿದ್ದರು. ಜೆಡಿಎಸ್ ಗೂ ಸಿದ್ದರಾಮಯ್ಯ ಮೇಲೆ ಅಸಮಾಧಾನವಿದೆ. ಹೀಗಾಗಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆಂದರೆ ಜೆಡಿಎಸ್ ಒಪ್ಪಲಾರದು. ಅನಿವಾರ್ಯವಾಗಿ ಹೊಸ ಮುಖ್ಯಮಂತ್ರಿಯನ್ನು ಆರಿಸಬೇಕಾಗುತ್ತದೆ. ಒಂದು ವೇಳೆ ಜೆಡಿಎಸ್ ಗೆ 40 ಕ್ಕಿಂತ ಹೆಚ್ಚು ಸ್ಥಾನ ಬಂದಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾದರೂ ಅಚ್ಚರಿಯಿಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.