Publish Date: Wed, 29 Aug 2018 (16:24 IST)
Updated Date: Wed, 29 Aug 2018 (16:27 IST)
ಟಿಬೆಟ್ ಅಧ್ಯಕ್ಷ ಲೋಬ್ಸಾಂಗ್ ಶಾಂಘೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯಕ್ಕೆ ಟಿಬೆಟ್ ಅಧ್ಯಕ್ಷ ಲೋಬ್ಸಾಂಗ್ ಶಾಂಘೆ ಭೇಟಿ ನೀಡಿದರು. ಒಡೆಯರಪಾಳ್ಯದಲ್ಲಿರುವ ಟಿಬೆಟ್ ಕ್ಯಾಂಪ್ ನಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಟಿಬೆಟ್ ಧಾರ್ಮಿಕ ಗುರುಗಳು, ಸಾರ್ವಜನಿಕರು ಸಹ ಪಾಲ್ಗೊಂಡಿದ್ದರು.
ಟಿಬೆಟ್ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ಮಹದೇವಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಟಿಬೆಟ್ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.