Select Your Language

Notifications

webdunia
webdunia
webdunia
webdunia

ಡಿಬಾಸ್ ಎಂದು ದರ್ಶನ್ ಫ್ಯಾನ್ಸ್ ರಗಳೆ, ಮೈಕ್ ಬಿಸಾಕಿ ಕೂತೇ ಬಿಟ್ಟ ಸಿಎಂ ಡಿಕೆ ಶಿವಕುಮಾರ್ Video

DK Shivakumar
ರಾಮನಗರ: ಇಲ್ಲಿನ ಕರಗ ಉತ್ಸವಕ್ಕೆ ಸಿಎಂ ಡಿಕೆ ಶಿವಕುಮಾರ್ ಬಂದಾಗ ಡಿಬಾಸ್ ಎಂದು ಕೂಗಿ ದರ್ಶನ್ ಅಭಿಮಾನಿಗಳು ರಗಳೆ ಮಾಡಿದ್ದು ಇದರಿಂದ ಸಿಟ್ಟಿಗೆದ್ದ ಅವರು ಮೈಕ್ ಬಿಸಾಕಿ ಕೂತ ಘಟನೆ ನಡೆದಿದೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಮನಗರ ಉತ್ಸವದಲ್ಲಿ ಭಾಗಿಯಾಗಿದ್ದ ಸಿಎಂ ಡಿಕೆ ಶಿವಕುಮಾರ್ ಮೈಕ್ ಹಿಡಿದುಕೊಂಡು ಮಾತನಾಡಲು ಎದ್ದು ನಿಂತರು. ಅವರು ಮಾತು ಆರಂಭಿಸುತ್ತಲೇ ದರ್ಶನ್ ಅಭಿಮಾನಿಗಳು ಡಿಬಾಸ್ ಎಂದು ಕೂಗುತ್ತಿದ್ದರು.

ಆಗ ಸಿಎಂ, ಓಕೆ, ನನಗೆ ಗೊತ್ತಾಯ್ತು, ನಿಮ್ಮ ನೋವು ಏನೆಂದು ಗೊತ್ತಾಗಿದೆ, ಸ್ವಲ್ಪ ತಾಳ್ಮೆಯಿಂದಿರಿ. ಇದೆಲ್ಲಾ ಪಬ್ಲಿಕ್ ನಲ್ಲಿ ಮಾತನಾಡುವ ವಿಚಾರವಲ್ಲ. ಎಲ್ಲಾ ಸರಿ ಮಾಡೋಣ ಎಂದು ಸಮಾಧಾನಿಸುವ ಪ್ರಯತ್ನ ಮಾಡಿದರು.

ಬಳಿಕ ಮತ್ತೆ ಡಿಕೆ ಶಿವಕುಮಾರ್ ಆರಂಭಿಸುತ್ತಿದ್ದಂತೇ ಅಭಿಮಾನಿಗಳು ಮತ್ತೆ ಡಿಬಾಸ್ ಎಂದು ಸದ್ದು ಮಾಡಲು ಆರಂಭಿಸಿದರು. ಇದರಿಂದ ಕಿರಿ ಕಿರಿಗೊಳಗಾದ ಸಿಎಂ, ಮೈಕ್ ಬಿಸಾಕಿ ಏಯ್ ಹೋಗ್ರೀ ಸುಮ್ನೇ.. ಡಿಬಾಸ್ ನ್ನೇ ಕಟ್ಕೊಂಡು ಹೋಗಲಿ ಅವರು ಎಂದು ಕುರ್ಚಿಯಲ್ಲಿ ಕೂತರು. ಬಳಿಕ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಅಭಿಮಾನಿಗಳನ್ನು ಗದರಿದರು. ಇದು ನಮಗೆಲ್ಲಾ ಅಗೌರವ, ಇದು ಇಡೀ ರಾಮನಗರಕ್ಕೆ ಅಗೌರವ. ದಯವಿಟ್ಟು ಮುಖ್ಯಮಂತ್ರಿಗಳು ಮಾತನಾಡುತ್ತಾರೆ, ಇದು ನಮ್ಮೆಲ್ಲರ ಕಾರ್ಯಕ್ರಮ. ನಾವೆಲ್ಲರೂ ಭಕ್ತಿಯಿಂದ ಆಚರಿಸುವ ಕಾರ್ಯಕ್ರಮ. ದಯವಿಟ್ಟು ನಿಶ್ಯಬ್ಧವಾಗಿರಿ ಎಂದು ಸುಮ್ಮನಾಗಿಸಿದರು. ಬಳಿಕ ಸಿಎಂ ಡಿಕೆ ಶಿವಕುಮಾರ್ ಮಾತು ಮುಂದುವರಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ರೆಬೆಲ್ ಶಾಸಕರ ಅಸಮಾಧಾನ ನಿಂತಿಲ್ಲ, ಸೀಕ್ರೆಟ್ ಆಗಿ ನಡೀತಿದೆ ಈ ಪ್ಲ್ಯಾನ್