ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ನಾಲ್ಕು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಬೆಂಗಳೂರು ಟೆಕ್ ಸಮ್ಮಿಟ್-2021 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್ 2021 ಕಾರ್ಯಕ್ರಮದಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.ಇಂದು ಸಂಜೆ ಬೆಂಗಳೂರಿನ ಎಚ್‍ಎಎಲ್ ಏರ್ಪೋರ್ಟ್‍ಗೆ ಆಗಮಿಸಲಿರುವ ಅವರು, ನಾಳೆ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಯಾಗಲಿದ್ದಾರೆ.ನಂತರ ಬುಧವಾರ ನಡೆಯಲಿರುವ ಕರ್ನಾಟಕ ಹಾಗೂ ದೇಶದ ಮಹತ್ವದ ಕಾರ್ಯಕ್ರಮವಾದ 24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಅಂದು ಸಂಜೆಯೇ ಹೈದರಾಬಾದ್‍ಗೆ ತೆರಳಲಿದ್ದಾರೆ.
ಈ ಸಮ್ಮಿಟ್‍ನಿಂದಾಗಿ ತಂತ್ರಜ್ಞಾನ ಕ್ಷೇತ್ರ ಇನ್ನಷ್ಟು ವಿಸ್ತರಣೆ ಆಗಲಿದೆ ಮತ್ತು ಉದ್ಯೋಗವಕಾಶಗಳೂ ಕೂಡ ಹೆಚ್ಚಲಿವೆ ಎಂದು ಹೇಳಲಾಗುತ್ತಿದೆ.