Publish Date: Sat, 13 Nov 2021 (15:46 IST)
Updated Date: Sat, 13 Nov 2021 (15:50 IST)
ವಿಧಾನಪರಿಷತ್‍ನ 25 ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ರ್ಪಧಿಸಲು 150ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.ಹಾಲಿ ಸದಸ್ಯರ ಪೈಕಿ ಬಹಳಷ್ಟು ಮಂದಿ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿದ್ದು, 2022ರ ಸಾವ್ರರ್ತಿಕ ಚುನಾವಣೆಯಲ್ಲಿ ವಿಧಾನಸಭೆಯಿಂದ ಸ್ರ್ಪಧಿಸುವ ಆಸಕ್ತಿ ತೋರಿಸಿದ್ದಾರೆ.
ಹೀಗಾಗಿ ಬೀದರ್‍ನ ವಿಜಯ್ ಸಿಂಗ್, ಹಾಸನದ ಗೋಪಾಲಸ್ವಾಮಿ, ಬೆಂಗಳೂರು ನಗರದ ನಾರಾಯಣಸ್ವಾಮಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಹುಡುಕುವ ಅನಿವಾರ್ಯತೆ ಎದುರಾಗಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಈಗಾಗಲೇ ಒಮ್ಮೆ ಒಂದು ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
2ನೇ ಬಾರಿ ನಡೆಯುವ ಸಭೆಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಸಂಭವನೀಯ ಅಭ್ಯರ್ಥಿಗಳ ಕರಡು ಪಟ್ಟಿ ತಯಾರಿಸಲಾಗುತ್ತದೆ. ಗೆಲ್ಲುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದು ಈ ಬಾರಿಯ ಉದ್ದೇಶವಾಗಿದೆ. ಪಕ್ಷದ ಸಕ್ರಿಯ ಪಾಲ್ಗೊಳ್ಳುವಿಕೆ, ಹಿರಿತನ ಹಾಗೂ ಪ್ರಾದೇಶಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಆಧರಿಸಿ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ.