Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ವಕೀಲ ಜಗದೀಶ್ ಅವರ ಬಂಧನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ವಕೀಲ ಸಮುದಾಯದಲ್ಲೂ ಸಹ ಅವರ ಬಗ್ಗೆ ಭಿನ್ನ ಅಭಿಪ್ರಾಯಗಳು ಹೊರ ಬರುತ್ತಿವೆ. ವಕೀಲ ಜಗದೀಶ್ ಅವರು ಬಳಸುವ ಕೆಟ್ಟ ಮಾತುಗಳನ್ನು ಯಾರೂ ಸಹಿಸಲ್ಲ. ಆದರೆ, ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ವಕೀಲ ಜಗದೀಶ ಅವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿರುವುದು ವಕೀಲರ ಸಂಘದಲ್ಲಿಯೇ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಟ್ಟಿದೆ.
ಪೊಲೀಸ್ ಆಯುಕ್ತರನ್ನು ಮತ್ತು ಡಿಜಿಪಿಯವರನ್ನು ಬಾಯಿಗೆ ಬಂದಂಗೆ ಮಾತನಾಡ್ತಾರೆ. ಅವರು ಈವರೆಗೂ ಹೋರಾಟ ನಡೆಸಿರುವ ಒಂದು ಪ್ರಕರಣ ತಾರ್ಕಿಕ ಅಂತ್ಯಗೊಳಿಸಿರುವುದನ್ನು ತೋರಿಸಲಿ ಎಂದು ಯುವ ವಕೀಲ, ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಈ ಕುರಿತು ಒನ್‌ಇಂಡಿಯಾ ಕನ್ನಡ ಲೈವ್ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಮಂದಿಟ್ಟಿದ್ದಾರೆ.