ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು! ಬಿಎಂಟಿಸಿ ಕೂಡ ಇದೇ ನೀತಿ ಅನುಸರಿಸಿ ಸಾರಿಗೆ ಸಿಬ್ಬಂದಿಯ ಕೆಂಗಣ್ಣಿಗೆ ಗುರಿಯಾಗಿದೆ. ಮೊನ್ನೆಯಷ್ಟೇ ದೇಶಕ್ಕೆ ಮಾದರಿ ಎಲೆಕ್ಟ್ರಿಕ್ ಬಸ್‌ಗಳನ್ನು ರೋಡ್‌ಗೆ ಇಳಿಸಿವೆ. ಆದರೆ, ದಿನ ನಿತ್ಯ ಸಂಚರಿಸುವ ಸಾಮಾನ್ಯ ಬಸ್‌ನಲ್ಲಿ ಪ್ರಯಾಣಿಕರಿಗೆ ನೀಡಲು ಬಸ್ ಟಿಕೆಟ್‌ಗಳೇ ಇಲ್ಲ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಡಿರುವ ಎಡವಟ್ಟಿನಿಂದ ನಿರ್ವಾಹಕರು ಮತ್ತು ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಸ್‌ಗಳಲ್ಲಿ ಖಾಲಿ ಸೀಟು ಇದ್ದರೂ ನಿರ್ವಾಹಕರು ಹತ್ತಿಸಿಕೊಳ್ಳಲಾಗುತ್ತಿಲ್ಲ. ಬಸ್ ಹತ್ತಿದರೂ ಪ್ರಯಾಣ ಮಾಡುವಂತಿಲ್ಲ. ಹೀಗಾಗಿ ಬಹುತೇಕ ಬಸ್‌ಗಳು ಖಾಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಹದಿನೈದು ದಿನದಿಂದ ಬಿಎಂಟಿಸಿ ಬಸ್ ನಿರ್ವಾಹಕರಿಗೆ ಟಿಕೆಟ್‌ಗಳೇ ನೀಡುತ್ತಿಲ್ಲ. ಹೀಗಾಗಿ ಪ್ರಯಾಣಕರ ಪ್ರಯಾಣ ಮಾಡಲು ಬಸ್ ಹತ್ತಿದರೆ ಅವರನ್ನು ಅನಿವಾರ್ಯವಾಗಿ ಕೆಳಗೆ ಇಳಿಸಲಾಗುತ್ತಿದೆ. ಇನ್ನು ಹಣ ಪಡೆದು ಟಿಕೆಟ್ ಕೊಡದೇ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ರೆ ಕೇಸು ಬೀಳುತ್ತೆ ಈ ರಿಸ್ಕ್ ಯಾಕೆ ಎಂಬ ಕಾರಣಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಬಸ್‌ಗಳನ್ನು ಚಾಲನೆ ಮಾಡುತ್ತಿದ್ದಾರೆ.
ಆಧುನೀಕರಣ ಹೆಸರಿನಲ್ಲಿ ಖರೀದಿಸಿದ ಇ ಟೆಕೆಟ್ ಯಂತ್ರಗಳು ಕಾರ್ಯ ನಿರ್ವಹಿಸದೇ ಮೂಲೆ ಗುಂಪಾಗಿವೆ. ಹೀಗಾಗಿ ಅನಿವಾರ್ಯವಾಗಿ ನಿರ್ವಾಹಕರು ಸಾಂಪ್ರದಾಯಿಕ ಟಿಕೆಟ್ ನೀಡಬೇಕಾಗಿದೆ. ಆದರೆ ಕಳೆದ ಹದಿನೈದು ದಿನದಿಂದ ಟಿಕೆಟ್‌ಗಳ ಕೊರತೆ ಎದುರಾಗಿದೆ. ಬಸ್ ನಿರ್ವಾಹಕರು ಟಿಕೆಟ್ ಇಂಡೆಂಟ್ ಹಾಕಿದರೂ ಅಷ್ಟು ಟಿಕೆಟ್ ಕೊಡಲಾಗುತ್ತಿಲ್ಲ. ಕೊಡುವ ಟಿಕೆಟ್ ಮುಗಿದ ಬಳಿಕ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗದೇ ನಿರ್ವಾಹಕರು ಪರದಾಡುತ್ತಿದ್ದಾರೆ. ಟಿಕೆಟ್‌ಗಳನ್ನು ಒದಗಿಸಿ ಎಂದು ಬಿಎಂಟಿಸಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಒದಗಿಸುತ್ತಿಲ್ಲ.